ಹುಣಸೂರು ಕಟ್ಟೆ ಮಳಲವಾಡಿಯ ಲೋಕೇಶ್ ಗೌಡರಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ನೇಮಕಾತಿ ಆಗಿತ್ತು. ಆದರೆ ದಿಢೀರನೆ ಅವರು ಮೃತರಾದುದುದರಿಂದ ಅವರ ತಮ್ಮ ಲಕ್ಷ್ಮಣೇ ಗೌಡ ಅದೇ ಹೆಸರಿನಲ್ಲಿ ಕೆಲಸಕ್ಕೆ ಸೇರಿಕೊಂಡರು.

ಲೋಕೇಶ್ ಸತ್ತಿದ್ದಾರೆ, ಇವರು ಲಕ್ಷ್ಮಣ್ ಎಂಬ ಗುಸುಗುಸು ಆರಂಭವಾದರೆ ವರ್ಗಾವಣೆ ಮಾಡಿಕೊಂಡು ಹೋಗುತ್ತಿದ್ದರು. 2019ರಲ್ಲಿ ಒಂದು ಸಣ್ಣ ಪತ್ರಿಕೆಯಲ್ಲಿ ಸುದ್ದಿಯಾದುದರಿಂದ ತನಿಖೆ ಆರಂಭವಾಯಿತು. ತನಿಖೆಗೆ ಮನೆಯವರು ಸಹಕರಿಸುತ್ತಿಲ್ಲ ಎಂದು ತಹಶಿಲ್ದಾರ್ ವರದಿ ನೀಡಿದರು. ಶಿಕ್ಷಣಾಧಿಕಾರಿ ಕೊನೆಗೆ ಪಿರಿಯಾಪಟ್ಟಣ ಪೋಲೀಸರಿಗೆ ದೂರು ನೀಡಿದರು. ಈಗ ಲಕ್ಷ್ಮಣೇ ಗೌಡರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ.