ಭಾರತ ಚಿತ್ರರಂಗ, ಅದ್ಭುತ ಅಮೋಘಗಳ ಸಾಗರ. ಈ ಸಾಗರದ ಅಡಿಯಲ್ಲಿ ಅಡಗಿದೆ ಅನೇಕ ಮುತ್ತು ರತ್ನಗಳು. ಇಂತಹಾ ಮುತ್ತುಗಳ ನಡುವೆ ಶುಭ್ರ ಪ್ರಕಾಶದಿಂದ ಹೊಳೆಯುವ ಅಪರೂಪದ ಹವಳವೇ ಓಂ ಸಿನಿಮಾ. 25 ವರ್ಷಗಳ ಹಿಂದೆಯೇ ಸಿನಿ ಪ್ರಿಯರ ಕಣ್ಣನ್ನು ಕನ್ನಡ ಚಿತ್ರರಂಗದತ್ತ ತಿರುಗಿಸಿದೆ ಕ್ಯಾತಿ ಓಂನದು.
ಕಥೆಯನ್ನೇ ನಾಯಕನನ್ನಾಗಿ, ರಿವಸ್ ಸ್ಕ್ರೀನ್ ಪ್ಲೇನ ನಾಯಕಿಯನ್ನಾಗಿ, ಸರ್ಪ್ರೈಸ್ ಅಂಶಗಳನ್ನು ವಿಲನ್ ಆಗಿ ಮಾಡಿದರೂ ನಿರ್ದೇಶಕರಾದ ಉಪೇಂದ್ರ ಅವರು ಎಲ್ಲಾ ವಿಭಾಗಕ್ಕು ಸಮಾನವಾಗಿ ಗುರುತಿಸುವಿಕೆಯನ್ನು ಕೊಡುವುದರಲ್ಲಿ ಸಫಲರಾಗಿದ್ದಾರೆ. ಜಗತ್ತಿನ ಭೂಗತದ ಭಯಾನಕ ತೊರಿಸಿ ಸತ್ಯಾ ಅಲಿಯಾಸ್ ಸತ್ಯಮೂರ್ತಿ ನಾಯಕನೊ, ದುರಂತ ನಾಯಕನೊ ಅಥವಾ ಖಳನಾಯಕನೊ ಎಂಬ ನೀರ್ಧಾರ ಪ್ರೇಕ್ಷಕನಿಗೆ ಬಿಟ್ಟಿರುವುದು ಈ ಸಿನಿಮಾದ ವಿಶೇಷ.
25 ವರ್ಷಗಳಲ್ಲಿ 550 ಮರು ಬಿಡುಗಡೆ ಹೊಂದಿದರೂ ಇಂದಿಗೂ ಬಾಕ್ಸ್ ಆಫೀಸ್ ಹಿಟ್ ಆಗುತಿರುವ ಈ ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟೇ ಇದರ ಹಾಡು ಹಾಗೂ ಹಿನ್ನೆಲೆ ಸಂಗೀತ. ಸಿನಿಮಾ ಶುರುವಾಗಿ 23 ನಿಮಿಷಗಳ ನಂತರ ಶಿವರಾಜ್ ಕುಮಾರ್ ಅವರು ಪರದೆಯ ಮೇಲೆ ಬಂದರೂ ಅವರೊಂದಿಗೆ ಬರುವ ಸಂಗೀತವು ನೋಡುಗರಲ್ಲಿ ರೋಮಾಂಚನ ತರಿಸುತ್ತದೆ.
ಓಂ ಕನ್ನಡ ಸಿನಿಮಾದ ದಿಕ್ಕನ್ನೆ ಬದಲಾಯಿಸಿದ ಸಿನಿಮಾ. ಸೆನ್ಸಾರ್ ಸಮಯದಲ್ಲಿ ಕೆಲವು ಭಿನ್ನಾಭಿಪ್ರಾಯ ಬಂದರು, ಸಿನಿ ಪರದೆಯಲ್ಲಿ ಅಂದಿನ ಭೂಗತ ಜಗತ್ತಿನ ದೊರೆಗಳನ್ನು ತೊರಿಸಿದರೂ, ಈ ಸಿನಿಮಾ ಮಾಡಿದ ಸಾಧನೆ ಒಂದೇ ಎರಡೇ. ಆದರೆ ಇದರ ಬೆನ್ನಲ್ಲೇ ಅನೇಕ ಭೂಗತ ಲೋಕದ ಕುರಿತಾದ ಸಿನಿಮಾಗಳು ಬಂದರೂ ಇದರಂತೆ ಹಿಂದೆ ಯಾವುದು ಇರಲಿಲ್ಲ ಮುಂದೆ ಬರುವುದಿಲ್ಲ.