ಹೆಬ್ರಿ : ಹೆಬ್ರಿ ಸಮೀಪದ ಮುದ್ರಾಡಿ ನಾಟ್ಕದೂರು ನಮತುಳುವೆರ್ ಕಲಾ ಸಂಘಟನೆಯ ವತಿಯಿಂದ ನಡೆಯುವ 3 ದಿನಗಳ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಗುರುವಾರ ಪತ್ರಕರ್ತ ಶ್ರೀದತ್ತ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ವಿಶ್ವ ರಂಗಭೂಮಿ ದಿನಾಚರಣೆ , ಸನ್ಮಾನ , ಸತ್ಯನಾಪುರದ ಸಿರಿ ನಾಟಕ ಪ್ರದರ್ಶನ. ನಾಟ್ಕ ಮುದ್ರಾಡಿ ರಾಷ್ಟ್ರವ್ಯಾಪಿಯಾಗಲಿ  ಶ್ರೀದತ್ತ ಶೆಟ್ಟಿ.

ಹಸಿರ ಸಿರಿಯ ನಡುವಿನ ಮುದ್ರಾಡಿಯ ಹಳ್ಳಿಯಲ್ಲಿ ನಿರಂತರ ನಡೆಸುತ್ತಿರುನಮ ತುಳುವೆರ್ ಕಲಾ ಸಂಘಟನೆ ರಾಷ್ಟ್ರಮಟ್ಟದಲ್ಲಿ ಬೆಳೆಯಲಿ ಎಂದು ಪತ್ರಕರ್ತ ಹೆಬ್ರಿ ಶ್ರೀದತ್ತ ಶೆಟ್ಟಿ ಆಶಿಸಿದರು.

ಅವರು ಗುರುವಾರ ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ನಮ ತುಳುವರ್ ಕಲಾ ಸಂಘಟನೆಯು ನೀಡಿದ ರಂಗಗೌರವ ಸ್ವೀಕರಿಸಿ ಮಾತನಾಡಿದರು.

ರಂಗಕರ್ಮಿ ಸುಕುಮಾರ್ ಮೋಹನ್ ತನ್ನ ಕುಟುಂಬವನ್ನೇ ರಂಗಭೂಮಿಗೆ ಸಮರ್ಪಿಸಿಕೊಂಡಿದೆ, ಸರ್ವಸ್ವವನ್ನು ಕಲೆ ತ್ಯಾಗ ಮಾಡುವುದು ಸುಲಭದ ಮಾತಲ್ಲ, ಕಲೆ ಸೇವೆ ದೇವಿ ಆರಾಧನೆಯ ಇನ್ನೊಂದು ಅಂಗ, ಹಿತ್ತಲ ಗಿಡ ಯಾವತ್ತೂ ಮದ್ದು ಆಗಲ್ಲ, ಮುದ್ರಾಡಿ ನಾಟ್ಕದೂರಿನ ಮಣ್ಣಿನಲ್ಲಿ ಜನ 

ತುಂಬಿಕೊಳ್ಳಬೇಕು, ಹಳ್ಳಿಯಲ್ಲಿ ರಂಗಭೂಮಿ ಹೇಗೆ ಕಟ್ಟಬಹುದು ಎಂದು ಅಪ್ರತಿಮ ಪ್ರತಿಭೆ ಮುದ್ರಾಡಿ ಸುಕುಮಾರ್ ಮೋಹನ್ ವಿಶ್ವಕ್ಕೆ ತೋರಿಸಿದ್ದಾರೆ ಎಂದು ರಂಗಭೂಮಿ ಉಡುಪಿಯ ಪ್ರದೀಪ್ ಕುತ್ಪಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಮಗೆ ಬದುಕು ಕಟ್ಟಲು, ಮನುಷ್ಯತ್ವವನ್ನು ಅರ್ಥ ಮಾಡಿಕೊಳ್ಳಲು,ವ್ಯಕ್ತಿಯಿಂದ ವ್ಯಕ್ತಿಯ ನಡುವೆ ಪ್ರೀತಿ ಬೆಳೆಸಲು, ಭಾವನೆಯನ್ನು ಅರ್ಥ ಮಾಡಿಕೊಳ್ಳಲು, ಮನುಷ್ಯನನ್ನು ಪರಿಪೂರ್ಣತೆಯೆಡೆಗೆ ಸಾಗಿಸಲು ನಾಟಕದಿಂದ ಮಾತ್ರ ಸಾಧ್ಯ, ಯಾವೂದೇ ಕಲಾ ಪ್ರಕಾರವನ್ನು ಅರಗಿಸಿ  

 ನಮ್ಮದಾಗಿಸಿಕೊಂಡಾಗ ನಾವು ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ ಎಂದ ಪ್ರದೀಪ್ ಕುತ್ಪಾಡಿ ಬೇಸರ,ದುಖ:,ನೋವು ದೂರಮಾಡಿ ಖುಷಿಯಲ್ಲಿ ಕಳೆಯಲು ನಾಟಕ ರಹದಾರಿಯಾಗಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರದ ಧರ್ಮದರ್ಶಿಯಾಗಿರುವ ಮುದ್ರಾಡಿ ನಾಟ್ಕದೂರು ನಮತುಳುವೆರ್ ಕಲಾ ಸಂಘಟನೆಯ ಸಂಸ್ಥಾಪಕ ಧರ್ಮಯೋಗಿ ಮೋಹನ್ ಕಲಾ ಸೇವೆ, ಕಲಾ ಆರಾಧನೆ, ನಾಟಕ ನಿತ್ಯ ನಡೆಯಲಿ, ನಮ ತುಳುವೆರ್ ಸತ್ಯವಂತರಾಗಲಿ ಎಂದು ಶುಭ ಹಾರೈಸಿದರು. 

ಅಮೋಘ ಉಡುಪಿಯ ಕಾರ್ಯದರ್ಶಿ ಅನಿಲ್ ಶೆಟ್ಟಿ, ಮುದ್ರಾಡಿ ನಾಟ್ಕದೂರು ನಮತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್ ಮೋಹನ್, ಸುಗಂಧಿಉಮೇಶ್ ಕಲ್ಮಾಡಿ, ವಾಣಿ ಸುಕುಮಾರ್, ಸುಧೀಂದ್ರ ಮೋಹನ್ ಮತ್ತಿತರರು ಇದ್ದರು.