2017ರಿಂದ ದೇಶದಲ್ಲಿ ಒಳಚರಂಡಿ ಮತ್ತು ಶೌಚ ಗುಂಡಿ ಸ್ವಚ್ಛ ಮಾಡುವಾಗ 321 ಜಲಗಾರರು ಸಾವಿಗೀಡಾಗಿದ್ದಾರೆ ಎಂದು ಸಾಮಾಜಿಕ ನ್ಯಾಯ ಮಂತ್ರಿ ರಾಮದಾಸ್ ಅಠವಳೆ ಸಂಸತ್ತಿನಲ್ಲಿ ಪ್ರಶ್ನೆಗೆ ಉತ್ತರಿಸುತ್ತ ತಿಳಿಸಿದರು.

321ರಲ್ಲಿ 259 ಮೃತರ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ. 2019 ಅತಿ ಹೆಚ್ಚು 117 ಮತ್ತು 2021ರಲ್ಲಿ ಅತಿ ಕಡಿಮೆ 22 ಇಂಥ ‌ಸಾವು ಆಗಿವೆ ಎಂದು ಅವರು ತಿಳಿಸಿದರು. ಕೆಲವು ಸಾವು ವರದಿಯಾಗುವುದಿಲ್ಲ ಎನ್ನುವುದನ್ನು ಅವರು ಒಪ್ಪಿಕೊಂಡರು.