ಜೂನ್ 10ರಂದು ರಾಜ್ಯ ಸಭೆಯ 57 ಸ್ಥಾನಗಳಿಗೆ ನಡೆಯಬೇಕಿದ್ದ ಚುನಾವಣೆಯಲ್ಲಿ 11 ರಾಜ್ಯಗಳಿಂದ 41 ಮಂದಿ ಅವಿರೋಧವಾಗಿ ಆಯ್ಕೆಯಾದರು. ಇನ್ನುಳಿದ 16 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಬೇಕಾಗಿದೆ.
ಕರ್ನಾಟಕ, ರಾಜಸ್ತಾನ, ಮಹಾರಾಷ್ಟ್ರ, ಹರಿಯಾಣ ಈ ನಾಲ್ಕು ರಾಜ್ಯಗಳಲ್ಲಿ ರಾಜ್ಯಸಭೆಗೆ ಶಾಸಕರ ಮತಗಳಿಂದ ಆಯ್ಕೆ ಆಗಬೇಕು.
ಉತ್ತರ ಪ್ರದೇಶದ 11, ತಮಿಳುನಾಡಿನ 6, ಬಿಹಾರದ 5, ಆಂಧ್ರದ 4 ಎಂದು 41 ಮಂದಿಯ ಅವಿರೋಧ ಆಯ್ಕೆ ಆಗಿದೆ.