ಬೆಳ್ತಂಗಡಿ ತಾಲೂಕಿನ ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಗೇಟಿನ ಮೇಲೆ ಹಿಂದೂಯೇತರರ ಯಾವುದೇ ಬಗೆಯ ವಾಹನಗಳಿಗೆ ಪ್ರವೇಶವಿಲ್ಲ ಎಂದು ಶುಕ್ರವಾರ ಕಟೌಟ್ ಅಳವಡಿಸಿರುವುದು ಕಂಡು ಬಂದಿದೆ.

ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಹಿಂದೂ ಜಾಗರಣ ವೇದಿಕೆ ಹೆಸರಿನಲ್ಲಿ ಈ ಕಟೌಟ್ ಬಿದ್ದಿದೆ. ಹಿಂದೂಯೇತರರು ಇಲ್ಲಿ ಬಂದು ಲವ್ ಜಿಹಾದ್ ಮಾಡುವುದು ಬೇಡ ಎಂದೂ ಅದರಲ್ಲಿ ಬರೆಯಲಾಗಿದೆ.

ಜಿಲ್ಲಾ ಪೋಲೀಸು ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆಯವರು ವಿಷಯ ಈಗ ತಿಳಿದು ಬಂದಿದೆ. ಸ್ಥಳೀಯವಾಗಿ ವಿವರಣೆ ಕೇಳಲಾಗಿದೆ. ಬೇಗನೆ ಕಟೌಟ್ ತೆಗೆಸಲಾಗುವುದು ಎಂದು ಹೇಳಿದರು.