ಶಾರ್ಜಾದಲ್ಲಿ ನಡೆದ ವಿಶ್ವ ಕಪ್ ಫುಟ್ಬಾಲ್ ಅರ್ಹತಾ ಟೂರ್ನಿಯಲ್ಲಿ ಕ್ರಿಸ್ಟಿಯಾನೋ ರೋನಾಲ್ಡೋ ಅವರು 58ನೇ ಹ್ಯಾಟ್ರಿಕ್ ಗೋಲು ಗಳಿಸಿ ಪೋರ್ಚುಗಲ್ ತಂಡಕ್ಕೆ 5-0 ಗೋಲುಗಳ ಭರ್ಜರಿ ಜಯ ಕೊಡಿಸಿದರು. ಸೋತ ಲಕ್ಸೆಂಬರ್ಗ್ ಒಂದು ಗೋಲು ಕೂಡ ಗಳಿಸಲಾಗಲಿಲ್ಲ. ಇದು ರೊನಾಲ್ಡೊ ಅವರ 115ನೆಯ ಅಂತರರಾಷ್ಟ್ರೀಯ ಕಾಲ್ಚೆಂಡು ಗೋಲು ಆಗಿದೆ.