ಪೆರು ದೇಶದ ರಾಜಧಾನಿ ಲಿಮಾದಲ್ಲಿ ನಡೆದ ಸ್ಕೇಟ್ ಶೂಟಿಂಗ್‌ನಲ್ಲಿ ಮನು ಬಾಕರ್ ಚಿನ್ನ ಗೆದ್ದರೆ ಚಂಡಿಗಡದ ಗನೆಯತ್ ಸೆಕೋನ್ ಚಿನ್ನ ತಪ್ಪಿಸಿಕೊಂಡರು.

ಜೂನಿಯರ್ ಸ್ಕೀಟ್‌ನಲ್ಲಿ ಗನೆಯತ್ ಮತ್ತು ಯುಎಸ್‌ಎಯ ಆಲಿಸಾ ಪೇಸ್ ಸಮಾನ ಅಂಕ ಪಡೆದರು. ಅಂತಿಮ ಗೆಲುವು ನಿರ್ಧಾರದ ಶೂಟ್ ನಲ್ಲಿ ಆಲಿಸಾ ಬಂಗಾರ ಪಡೆದರೆ, ಗನೆಯತ್ ಸೆಕೋನ್ ಬೆಳ್ಳಿಗೆ ತೃಪ್ತಿ ಪಡಬೇಕಾಯಿತು. ಈ ವಿಭಾಗದ ಕಂಚು ಇಟೆಲಿಯ ಸಾರಾ ಬೊಂಗಿನಿಗೆ ಸಂದಿತು.

ಬಾಳಾ ಸಾಹೇಬ್ ಪಾಟೀಲ್, ಇಶಾ ಸಿಂಗ್ ಬೆಳ್ಳಿ ಹಾಗೂ ರಮಿತಾ ಕಂಚು, ಪದಕ ಗೆದ್ದ ಇತರ ಭಾರತೀಯರು.