ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗವು ಎಐಸಿಟಿಇ-ಅಟಲ್ ಪ್ರಾಯೋಜಿತ ಆರು ದಿನಗಳ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂ (FDP) — “ಎಪ್ಲಿಕೇಶನ್ ಆಫ್ ಮೆಶಿನ್ ಲರ್ನಿಂಗ್ ಟೆಕ್ನಿಕ್ಸ್ ಇನ್ ಹೆಲ್ತ್ಕೇರ್” ಎಂಬ ವಿಷಯದ ಬಗೆಗೆ, ಡಿಸೆಂಬರ್ 8 ರಿಂದ 13ರ ವರೆಗೆ ಆಯೋಜಿಸಿದೆ.

ಈ ಆರು ದಿನಗಳ FDP ಉದ್ಘಾಟನಾ ಸಮಾರಂಭವು ಡಿಸೆಂಬರ್ 8ರಂದು ಬೆಳಗ್ಗೆ 9:30ಕ್ಕೆ ನಿಟ್ಟೆಯಲ್ಲಿ ಜರುಗಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರು ಇದರ ಮುಖ್ಯ ಸಂಶೋಧನಾ ವಿಜ್ಞಾನಿ ಡಾ. ಎಸ್. ಎನ್. ಓಂಕರ ಭಾಗವಹಿಸುವರು. ನಿಟ್ಟೆ (ಡಿಮ್ಡ್ ಟು ಬಿ ಯೂನಿವರ್ಸಿಟಿ)ಯ ತಾಂತ್ರಿಕ ಶಿಕ್ಷಣ ವಿಭಾಗದ ಉಪಾಧ್ಯಕ್ಷರಾದ ಡಾ. ಗೋಪಾಲ್ ಮುಗೆರಾಯ ಗೌರವ ಅತಿಥಿಯಾಗಿ ಹಾಜರಾಗುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ನಿರಂಜನ ಎನ್. ಚಿಪ್ಲುಂಕರ್ ವಹಿಸಲಿದ್ದಾರೆ.
ಆರೋಗ್ಯ ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಮೆಷೀನ್ ಲರ್ನಿಂಗ್ ತಂತ್ರಗಳ ಬಳಕೆ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಈ FDP ಅನ್ನು ಆಯೋಜಿಸಲಾಗಿದೆ. ಭಾಗವಹಿಸುವವರಿಗೆ ಥಿಯರಿ ಹಾಗೂ ಪ್ರಾಯೋಗಿಕ ಜ್ಞಾನ ಒದಗಿಸುವ ಉದ್ದೇಶದಿಂದ ತಜ್ಞರಿಂದ ಉಪನ್ಯಾಸ, ಪ್ರಯೋಗ ಸೆಶನ್ಸ್, ಚರ್ಚೆಗಳು ಮತ್ತು ಕೇಸ್ ಸ್ಟಡಿಗಳನ್ನೊಳಗೊಂಡ ಸಮಗ್ರ ಕಾರ್ಯಕ್ರಮವನ್ನು ರೂಪಿಸಲಾಗಿದೆ.
FDPಗೆ IISc ಬೆಂಗಳೂರು, NITK ಸುರತ್ಕಲ್, MIT ಮಣಿಪಾಲ, HPE ಬೆಂಗಳೂರು, Wipfli, ಹಾಗೂ ನಿಟ್ಟೆಯ ಸಂಸ್ಥೆಗಳಿಂದ ಶೈಕ್ಷಣಿಕ ಹಾಗೂ ಕೈಗಾರಿಕಾ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುತ್ತಾರೆ. ಡಾ. ಅಶ್ವಿನಿ ಬಿ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆಯ ಸಂಯೋಜಕತ್ವದಲ್ಲಿ, ಡಾ. ರಮೇಶ್ ಜಿ ಅವರ ಸಹ ಸಂಯೋಜಕತ್ವದಲ್ಲಿ ಹಾಗೂ ಡಾ. ವೈಕುಂಠ ಪೈ ಮತ್ತು ಡಾ. ಸಂತೋಷ್ ಎಸ್ ಅವರ ಆಯೋಜನಾ ಸಮಿತಿಯ ಸದಸ್ಯರಾಗಿ ಈ ಪ್ರಾಧ್ಯಾಪಕ ಅಭಿವೃದ್ಧಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.