ಧರ್ಮಸ್ಥಳ: ವಿಶ್ವ ವನಿತಾ ಕಬಡ್ಡಿಯಲ್ಲಿ ಚಾಂಪಿಯನ್ ಶಿಪ್ ಪಡೆದ ಭಾರತ ತಂಡವನ್ನು ಪ್ರತಿನಿಧಿಸಿ ರಾಜ್ಯಕ್ಕೆ ಕೀರ್ತಿ ತಂದ ಧನಲಕ್ಷ್ಮೀ ಪೂಜಾರಿ ಇಡ್ಯಾ ಅವರು ಭಾನುವಾರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಪೂಜ್ಯರು ಧನಲಕ್ಷ್ಮೀ ಪೂಜಾರಿ ಅವರನ್ನು ಗೌರವಿಸಿ ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಹರಸಿದರು. ಧನಲಕ್ಷ್ಮೀ ಅವರ ತಂದೆ ನಾರಾಯಣ ಪೂಜಾರಿ, ತಾಯಿ ಶಶಿಕಲಾ, ಕೋಚ್ ಹಂಸವತಿ ಸಿ.ಎಚ್. ಹಾಗೂ ಕುಟುಂಬದ ಸದಸ್ಯರು ಜತೆಗಿದ್ದರು.