ಮಂಗಳೂರು ಜೂ 24: ಶಕ್ತಿನಗರದ ಶಕ್ತಿ ಪದವಿ ಪೂರ್ವ ಕಾಲೇಜು ಮತ್ತು ಕ್ರೀಡಾ ಭಾರತಿ ಮಂಗಳೂರು ಇದರ ಸಹಯೋಗದೊಂದಿಗೆ ಶಕ್ತಿ ಶಾಲೆಯ ರೇಷ್ಮಾ ಮೆಮೋರಿಯಲ್ ಸಂಭಾಗಣದಲ್ಲಿ ದಿನಾಂಕ 21ನೇ ಮಂಗಳವಾರದಂದು 8ನೇ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. 

    ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜನಪ್ರಿಯ ಜಾದೂಗಾರರಾದ ಕುದ್ರೋಳಿ ಗಣೇಶ್ ಅವರು ಮಾತನಾಡಿ “ಶತಮಾನಗಳ ಇತಿಹಾಸ ಇರುವ ಈ ಯೋಗವನ್ನು ಪ್ರಸ್ತುತ ನಾವೆಲ್ಲಾ ಕಲಿಯಬೇಕಾಗಿದೆ. ಏಕಾಗ್ರತೆ, ಮಾನಸಿಕ ಒತ್ತಡ ನಿರ್ವಹಣೆಗೆ ಮತ್ತು ನಾವು ಸದಾಕಾಲ ಪ್ರಜ್ಞಾಸ್ಥಿತಿಯಲ್ಲಿದ್ದು ದಿನನಿತ್ಯದ ಚಟುವಟಿಕೆಗಳನ್ನು ಕ್ರಮ ಬದ್ಧವಾಗಿ ನಿರ್ವಹಿಸಲು ಯೋಗಅತ್ಯಂತ ಮುಖ್ಯವಾಗಿದೆ. ಯೋಗ ಸಂಸ್ಕಾರವನ್ನು ಕಲಿಸುತ್ತದೆ. ಭಾರತ ವಿಶ್ವಕ್ಕೆ ಕೊಟ್ಟ ಕೊಡುಗೆ ಈ ಯೋಗವನ್ನು ವಿಶ್ವವೇ ಆವರಿಸುತ್ತಿದೆ. ನವ ಭಾರತ ನಿರ್ಮಾಣ ಮಾಡಲು ಸಧೃಡ ಯುವಕರ ಪಾತ್ರ ಮುಖ್ಯ ಅದಕ್ಕಾಗಿ ಯೋಗಾಭ್ಯಾಸ ಮಾಡಬೇಕು. ದುಶ್ಚಟಗಳಿಂದ ನಮ್ಮನ್ನು ದೂರ ಇರುವಂತೆ ಈ ಯೋಗ ಸಹಕರಿಸುತ್ತದೆ” ಎಂದು ಹೇಳಿದರು.

ನಂತರ ಗೋಪಾಲಕೃಷ್ಣ ದೇಲಂಪಾಡಿ ಪ್ರತಿಷ್ಠಾನದ ಸದಸ್ಯರಾದ ಸುಭದ್ರ ಮತ್ತು ಕಲ್ಪ ಭಟ್ ಅವರಿಂದ ಯೋಗತರಬೇತಿ ನಡೆಯಿತು. ವಿದ್ಯಾರ್ಥಿಗಳು ಉತ್ಸು ಕತೆಯಿಂದ ಭಾಗವಹಿಸಿದರು.

ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರಥ್ವಿರಾಜ್, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ ಕಾಮತ್, ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್. ಕೆ, ಅಭಿವೃದ್ಧಿ ಅಧಿüಕಾರಿ ಪ್ರಖ್ಯಾತ್ ರೈ, ಶಿಕ್ಷಕರು-ಶಿಕ್ಷಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.