ಬೆಂಗಳೂರಿನಲ್ಲಿ ತಮಿಳುನಾಡು ಮೂಲದ ನೆಲ ಹಂಚು ಜೋಡಿಸುವ ಕುಟುಂಬಗಳಲ್ಲಿ ಬಾಲಕಿಯನ್ನು ಅತ್ಯಾಚಾರ ಮಾಡಿದ ಮುದುಕನನ್ನು ಸಂಬಂಧಿಕರು ಹೊಡೆದ ಕಾರಣ ಆಕಸ್ಮಿಕ ಕೊಲೆ ನಡೆದಿದೆ. ಇವರೆಲ್ಲ ಅಕ್ಕಪಕ್ಕ ವಾಸಿಸುತ್ತಿದ್ದರು. ಬಾಲಕಿಗೆ ಮತ್ತು ಬರುವ ಪಾನೀಯ ನೀಡಿದ್ದ, ಮತಿ ಕಳೆದುಕೊಂಡಾಗ ನಗ್ನವಾಗಿಸಿ ಅತ್ಯಾಚಾರ ಮಾಡಿದ್ದ. ಅಷ್ಟರಲ್ಲಿ ಸಂಬಂಧಿಕರು ನೋಡಿ ಕುಪ್ಪಣ್ಣ ಎಂಬ ಆ ಮುದುಕನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾರೆ.

ಆಮೇಲೆ ಪೋಲೀಸು ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೋಲೀಸರು ಮನೆಗೆ ಬಂದರೆ ಕುಪ್ಪಣ್ಣ ಸತ್ತು ಬಿದ್ದಿದ್ದ, ಪೋಲೀಸರು ಹುಡುಗಿಯ ಅಣ್ಣ, ಸ್ನೇಹಿತ, ಅಣ್ಣನ ಹೆಂಡತಿಯ ಸಂಬಂಧಿಕ ಎಂದು ಮೂವರನ್ನು ಬಂಧಿಸಿದ್ದಾರೆ, ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.