ಮಂಗಳೂರು: ಶಕ್ತಿನಗರದ ಕಲಾಂಗಣದಲ್ಲಿ ಮಾಂಡ್ ಸೊಭಾಣ್ ಇದರ ಚೊಚ್ಚಲ ಚಲನ ಚಿತ್ರ ಅಸ್ಮಿತಾಯ್ (ಅಸ್ಮಿತೆ) ಇದರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ತುಳು ಸಿನೆಮಾ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮತ್ತು ಕೊಂಕಣಿ ನಟ ನಿರ್ಮಾಪಕ ಪ್ರಿನ್ಸ್ ಜೇಕಬ್ ಗೋಡೆಗೆ ಚಿತ್ರದ ಪೋಸ್ಟರ್ ಅಂಟಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಬಿಡುಗಡೆ ನಡೆಸಿ ಕೊಟ್ಟರು. 

ನಂತರ ಮಾತನಾಡಿದ ಕೊಡಿಯಾಲ್ ಬೈಲ್ ಕೊಂಕಣಿ ಕ್ರೈಸ್ತರು ತಮ್ಮ ಚರ್ಚ್ ವಠಾರಗಳಲ್ಲಿ ತುಳು ನಾಟಕಗಳನ್ನು ಪ್ರದರ್ಶಿಸಿ ರಂಗಭೂಮಿಯ ಬೆಳವಣಿಗೆಗೆ ಕಾರಣರಾದವರು. ತುಳು ಚಿತ್ರ ರಂಗ ಬೆಳೆದಂತೆ ಕೊಂಕಣಿ ಸಿನೆಮಾ ಕೂಡಾ ಬೆಳೆಯಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಉದ್ಯಮಿಗಳಾದ ರೊಯ್ ಕ್ಯಾಸ್ತೆಲಿನೊ, ರೋಹನ್ ಮೊಂತೇರೊ, ವಿನ್ಸೆಂಟ್ ಕುಟಿನ್ಹಾ, ಒಲ್ವಿನ್ ರಾಡ್ರಿಗಸ್ ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಲುವಿ ಪಿಂಟೊ, ಸ್ಟ್ಯಾನಿ ಆಲ್ವಾರಿಸ್, ಕಿಶೋರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು, 

ಚಿತ್ರದ ಬಗ್ಗೆ ಮಾಹಿತಿ ನೀಡಿದ ಎರಿಕ್ ಒಝೇರಿಯೊ ಕೊಂಕಣಿ ಅಸ್ಮಿತೆಯ ಹುಡುಕಾಟವಿರುವ, ಕೊಂಕಣಿ ಜನರ ವಲಸೆಯ ಬಗ್ಗೆ ಒಳ ನೋಟಗಳಿರುವ ಈ ಚಲನ ಚಿತ್ರ ಎಲ್ಲಾ ವರ್ಗದ ಜನರಿಗೆ ಆಪ್ತವೆನಿಸಲಿದೆ ಜನವರಿಯಿಂದ ಚಿತ್ರೀಕರಣ ರಂಭಿಸಿ, ಸೆಪ್ಟೆಂಬರ್ ಒಳಗೆ ಚಿತ್ರ ಬಿಡುಗಡೆ ಮಾಡುವ ಕಾರ್ಯ ಯೋಜನೆ ಇದೆ - ಎಂದರು. ಆಡಿಷನ್ ಮುಖಾಂತರ ಆಯ್ಕೆಯಾದ ನಾಯಕ ನಟ – ಆಶ್ವಿನ್ ಡಿಕೋಸ್ತಾ ಮತ್ತು ನಾಯಕ ನಟಿ - ಸೋನಲ್ ಆಗ್ನೆಸ್ ಮೊಂತೇರೊ ಇವರನ್ನು ಪರಿಚಯಿಸಲಾಯಿತು. ನಂತರ ಚಿತ್ರದ ಪ್ರಮುಖ ತಾಂತ್ರಿಕ ವರ್ಗವನ್ನು ಪರಿಚಯಿಸಲಾಯಿತು.

ಕತೆ - ಎರಿಕ್ ಒಝೇರಿಯೊ, ಚಿತ್ರಕತೆ - ಜೊಯೆಲ್ ಪಿರೇರಾ, ಸಹ ನಿರ್ದೇಶನ – ನೆಲ್ಲು ಪೆರ್ಮನ್ನೂರು, ನಿಕಿಲೇಶ್, ಜೊಯೆಲ್ ಪಿರೇರಾ, ಸಹ ನಿರ್ದೇಶಕರು - ಆಮ್ರಿನ್ ಡಿಸೋಜ ಕಲಾಕುಲ್, ರಾಜಿತ್ ಪಿಂಟೊ, ಛಾಯಾಗ್ರಹಣ – ಬಾಲರಾಜ್ ಗೌಡ, ಸಂಕಲನ – ಮೇವಿನ್ ಜೊಯೆಲ್ ಪಿಂಟೊ, ವಸ್ತ್ರ ವಿನ್ಯಾಸ – ಡೆನಿಸ್ ಮೊಂತೇರೊ, ಸಂಗೀತ – ಎರಿಕ್ ಒಝೇರಿಯೊ, ಆಲ್ವಿನ್ ಫೆರ್ನಾಂಡಿಸ್, ಜೊಯೆಲ್ ಪಿರೇರಾ, ಹಿನ್ನಲೆ ಸಂಗೀತ – ಪ್ರೇಮ್ ಭರತ್, ಡಿಜಿಟಲ್ ಮಿಕ್ಸಿಂಗ್ – ಬಿ.ಜೆ.ಭರತ್, ಡಿಐ & ವಿಎಫ್ಎಕ್ಸ್ – ಸರ್ವ ಸ್ಟೂಡಿಯೊಸ್ ಬೆಂಗಳೂರು, ಪ್ರಚಾರ – ಮೇರಿಯನ್ ಡಿಸೋಜ, ಸ್ಥಿರ ಚಿತ್ರಣ – ನೆಲ್ಲು ಪೆರ್ಮನ್ನೂರು, ನೃತ್ಯ – ಆವಿಲ್ ಡಿಕ್ರೂಜ್, ರಾಹುಲ್ ಪಿಂಟೊ, ಕಲೆ – ಹೆನ್ರಿ ಫೆರಾವೊ ಪಡೀಲ್, ಪೋಸ್ಟರ್ ವಿನ್ಯಾಸ – ವಿಲ್ಸನ್ ಕಯ್ಯಾರ್, ನಟನಾ ತರಬೇತಿ – ವಿದ್ದು ಉಚ್ಚಿಲ್, ಸಂಶೋಧನೆ – ಡಾ. ಪಿಯುಸ್ ಫಿದೆಲಿಸ್ ಪಿಂಟೊ, ಫಾ. ಜಯಪ್ರಕಾಶ್, ಡಾ ರುಡಾಲ್ಫ್ ನೊರೊನ್ಹಾ, ಡಾ. ಮೊನಾ ಮೆಂಡೊನ್ಸಾ, ಗೀತ ಸಾಹಿತ್ಯ – ಫಾ ಆಲ್ವಿನ್ ಸಿಕ್ವೇರಾ, ರೊನಿ ಕ್ರಾಸ್ತಾ, ಲೊಯ್ಡ್ ರೇಗೊ, ಆತಿಥ್ಯ ನಿರ್ವಹಣೆ – ನವೀನ್ ಲೋಬೊ, ಕಛೇರಿ – ವಿಕ್ಟರ್ ಮತಾಯಸ್, ನಿರ್ಮಾಣ ನಿರ್ವಹಣೆ – ಕಾರ್ತಿಕ್ ರೈ ಅಡ್ಯನಡ್ಕ, ಕಾರ್ಯಕಾರಿ ನಿರ್ಮಾಪಕ – ರೊನಿ ಅರುಣ್, ನಿರ್ಮಾಪಕರು – ಲುವಿಸ್ ಜೆ ಪಿಂಟೊ (ಮಾಂಡ್ ಸೊಭಾಣ್ ನಿರ್ಮಾಣ) ನಿರ್ದೇಶಕ – ವಿಲಾಸ್ ರತ್ನಾಕರ್ ಕ್ಷತ್ರಿಯ ನಂತರ ಪ್ರಸಿದ್ಧ ಗಾಯಕಿ ಲುಲು ಫೊರ್ಟೆಸ್ ಇವರಿಂದ ಕೆಲ ಮಧುರ ಹಾಡುಗಳ ಪ್ರಸ್ತುತಿ ನಡೆಯಿತು. ರೋಶನ್ ಬೇಳ, ಸಂಜಿತ್ ರೊಡ್ರಿಗಸ್, ಸ್ಟಾಲಿನ್ ಡಿಸೋಜ, ರಸೆಲ್ ಮತ್ತು ಪ್ರಜ್ವಲ್ ಪ್ರೊಂಟೆರೊ ಸಂಗೀತದಲ್ಲಿ ಸಹಕರಿಸಿದರು. ಅರುಣ್ ರಾಜ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.