ಮಂಗಳೂರು:  ರಾಜ್ಯದಲ್ಲಿ ಪಂಚ ರತ್ನ ರಥ ಯಾತ್ರೆಯ ಪೂರ್ವ ತಯಾರಿಯಾಗಿ ಮಂಗಳೂರು ದಕ್ಷಿಣ ವಿದಾನ ಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಪ್ರಚಾರ ಚಾಲನೆಯನ್ನು ಕದ್ರಿ ಮಂಜುನಾಥ ಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಅಧ್ಯಕ್ಷ ಅಧ್ಯಕ್ಷರಾದ ಜಾಕೆ ಮಾದವ ಗೌಡರು ಚಾಲನೆ ನೀಡಿ ರಾಜ್ಯದಲ್ಲಿ 2023 ರ ಚುನಾವಣೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ನಿಶ್ಚಿತ. ಅವರ ಜಲಧಾರೆ ಹಾಗೂ ಪಂಚ ರತ್ನ ಯೋಜನೆ ಈ ರಾಜ್ಯದ ನವ ನಿರ್ಮಾಣದ ಕಲ್ಪನೆ. ರಾಜ್ಯದ ಮೂಲೆ ಮೂಲೆಗಳಿಂದ ಸಂಪೂರ್ಣ ಬೆಂಬಲ ದೊರಕುತ್ತಿದು ವಿರೋಧ ಪಕ್ಷಗಳು ಭಯಭೀತರಾಗಿದ್ದಾರೆ  ಎಂದು ಹೇಳಿದರು.  ಹಾಗೂ ದಕ್ಷಿಣ ವಿದಾನ ಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯಾಗಿ ಸುಮತಿ ಹೆಗ್ಡೆ ಎಂದು ಅಯ್ಕೆ ಮಾಡಲಾಗಿದೆ ಎಂದು ಹೇಳಿದರು. ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಹಾಗೂ ನಿಯೋಜಿತ ಅಭ್ಯರ್ಥಿ ಸುಮತಿ ಹೆಗ್ಡೆ ಮಾತನಾಡಿ ಕುಮಾರಸ್ವಾಮಿಯ ಆದೇಶದ ಮೇರೆಗೆ ಈ ಕಾರ್ಯಕ್ರಮ ಆಯೋಜಿಸಿದ್ದು  ವಿಧಾನಸಭಾ ಕ್ಷೇತ್ರದ 38  ವಾರ್ಡಗಳಲ್ಲಿ ಪ್ರಚಾರ ಜಾತ ಸಂಚರಿಸಲಿದೆ. ಹಾಗೂ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಭೇಟಿ  ನೀಡಲಿದೆ ಎಂದು ಹೇಳಿದರು. 

ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ ಮಾತನಾಡಿ ಬಿಜೆಪಿ ಪಕ್ಷ ಜನರಲ್ಲಿ ಭಯ ಭೀತಿ ದ್ವೇಷ. ಹಾಗೂ ಬ್ರಷ್ಟಾಚಾರ , ಬೆಲೆ ನಿಯಂತ್ರಣ ಮಾಡಲು ಸಂಪೂರ್ಣ ಸೋತಿದ್ದು ಇನ್ನೊಂದೆಡೆ ಕಾಂಗ್ರೆಸ್ ಅಧಿಕಾರ ಪಡೆದ ಹಾಗೆ ತಿರುಕನ ಕನಸು ಕಂಡಿದ್ದು ಮುಖ್ಯಮಂತ್ರಿ ಪೈಪೋಟಿಯಲ್ಲಿ ತೊಡಗಿದೆ. ಆದರೆ ಜೆಡಿಎಸ್ ಪಕ್ಷ ಜನ ಸಾಮಾನ್ಯರ ಕಷ್ಟ ಅರಿತುಕೊಳ್ಳಲು ಪಂಚರತ್ನ ಯೋಜನೆ ಮೂಲಕ ಜನರ ಜೊತೆಯಲ್ಲಿ ಮಗ್ನರಾಗಿದೆ ಎಂದು ಹೇಳಿದರು. ರಾಜ್ಯ ಜೆಡಿಎಸ್ ನಾಯಕರಾದ ರತ್ನಾಕರ ಸುವರ್ಣ, ಜಮೀರ್ ಷಾ, ಇಕ್ಬಾಲ್ ಮುಲ್ಕಿ, ದಿನಕರ್ ಉಳ್ಳಾಲ್ ಕಡಬ ಕ್ಷೇತ್ರದ ಅಧ್ಯಕ್ಷ ಮೀರಾ ಸಾಹೇಬ್, ಯುವನಾಯಕ ಪೈಜಾಲ್ ಮುಂತಾದವರು ಮಾತನಾಡಿದರು. ಕನಕದಾಸ ಕುಳೂರ್, ಮುನೀರ್ ಮುಕ್ಕಚೇರಿ,  ವಿನ್ಸೆಂಟ್ ಕೋಡಿಕಲ್, ಅಲ್ತಾಫ್ ತುಂಬೆ, ರವೀಂದ್ರ ಉಳ್ಳಾಲ ವೀಣಾ ಶೆಟ್ಟಿ, ಭಾರತೀ ಪುಷ್ಪರಾಜನ್  ಪ್ರಿಯಾ ಸಾಲಿಯಾನ್, ಕವೀತಾ ಜೋಹರ್.  ಬಸೀರ್ ಬೇಗಂ, ಲತೀಫ್ ಒಳಚಿಲ್  ,ಎಚ್.ಕೆ. ಚಂದ್ರಶೇಖರ್ ಸುಮೀತ್ ಸುವರ್ಣ, ನಾಸಿರ್ ಬೆಂಗ್ರೆ, ರಾಶ್  ಬ್ಯಾರಿ,  ನೀಲಂ, ಬಸವರಾಜ್, ಮನೋಜ್, ಜಾವೇದ್ ನಜೀರ್,  ಯುವ ಜನತಾದಳ ವಿಧ್ಯಾರ್ಥಿ ಅಧ್ಯಕ್ಷ  ಬಿಲಾಲ್ , ಮಹಮದ್ ಉಪಸ್ಥಿತಿತರಿದ್ದರು , ಅಲ್ತಾಫ್ ತುಂಬೆ ನಿರೂಪಿಸಿದರು.