ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಸುಂದರ ಮೂಡುಬಿದರೆಯ ಬಸ್ಸು ನಿಲ್ದಾಣದ ಸೌಂದರ್ಯವನ್ನು ನಿನ್ನೆ ಅಷ್ಟೇ ತೆರೆದಿಡಲಾಗಿತ್ತು. ಅದಕ್ಕೆ ಪೂರಕವಾಗಿ ಬಹಳಷ್ಟು ಸ್ಟೈಲ್ ಆಗಿ ರೂಪುಗೊಳ್ಳುತ್ತಿರುವ ಮೂಡುಬಿದಿರೆಯ ಮುಖ್ಯ ಕೇಂದ್ರ ಸ್ಥಾನ. ಈ ಪ್ರದೇಶ ಬಿ ಇ ಓ ಕಚೇರಿಯ ಎದುರುಗಡೆ ನಿಶ್ಮಿತ ಟವರ್ಸ್.
ನವಮಿ ಲೈಫ್ ಸ್ಟೈಲ್ ಇತ್ಯಾದಿಗಳಿಂದ ಕೂಗಳತೆಯ ದೂರದಲ್ಲಿರುವ ಸರ್ಕಲ್ ನ ಒಂದು ಮಗ್ಗುಲು. ರಾತ್ರಿಯ ಹೊತ್ತು ಈ ಪ್ರದೇಶ ಕತ್ತಲೆಯಿಂದ ಆವರಿಸಿದ್ದು ಕೆಲವಾರು ನಾಲ್ಕು ಚಕ್ರದ ಕಾರುಗಳನ್ನು ಅಡ್ಡವಾಗಿರಿಸಿ ಕುಡಿತವನ್ನು ಪೂರೈಸಿ, ಬಾಟಲಿಗಳನ್ನು ಬದಿಗೆ ಎಸೆದು, ಬಹಿರ್ದೆಸೆಯನ್ನೂ ಮಾಡಿ ಅಲ್ಲಿಂದ ತೆರಳುವವರ ಬಗೆಗೆ ನಾಗರಿಕ ಸಮಾಜ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ. ಪೊಲೀಸರು ಕೂಡ ಈ ಪ್ರದೇಶ, ಹಳೆಯ ಬಸ್ಸು ನಿಲ್ದಾಣದಿಂದ ಹೊಸ ಹೊಸ ನಿಲ್ದಾಣಕ್ಕೆ ಬರುವ ಮೆಟ್ಟಿಲಿನ ಬದಿ ಹಾಗೂ ಇತರ ಅಡ್ಡಾಗಳ ಬಗ್ಗೆ ಸದಾ ಗಮನ ಇಡುವುದು ಅಗತ್ಯವಾಗಿದೆ.