ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಪ್ರತಿ ದಿನ ಸಾವಿರಾರು ವಾಹನಗಳು ಬಂದು ತೆರಳುವ ಮೂಡುಬಿದರೆಯ ಬಸ್ಸು ನಿಲ್ದಾಣದ ಪರಿಸ್ಥಿತಿಯನ್ನು ಗಮನಿಸಿದರೆ ದೇವರೇ ಗತಿ. ಪ್ರಯಾಣಿಕರಿಗೆ ಸರಿಯಾದ ವ್ಯವಸ್ತೆಗಳಿಲ್ಲ, ಮಳೆ ಬಂದರೆ ಅದರಿಂದ ಬಚಾವಾಗಲು ಸರಿಯಾದ ಛಾವಣಿ ಇಲ್ಲ. ವಾಹನಗಳು ನಿಲ್ದಾಣವನ್ನು ಹೊಕ್ಕುವ ಪ್ರದೇಶದಲ್ಲಿ ನಿಲ್ಲಿಸಲ್ಪಟ್ಟಿರುವ ವಾಹನಗಳು. ಒಳಬರುವ ಪ್ರದೇಶದಲ್ಲಿಯೇ ಮಧ್ಯದಲ್ಲಿಯೇ ಹೊರ ನುಗ್ಗುವ ಖಾಸಗಿ ವಾಹನಗಳು.
ಶಿರ್ತಾಡಿ, ನಾರಾವಿ ಕಡೆ ಚಲಿಸುವ ವಾಹನಗಳು ನಿಲ್ಲುವ ಪ್ರದೇಶವಿಡಿ ಖಾಸಗಿ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳಿಂದ ಸಂಪೂರ್ಣ ತುಂಬಿರುತ್ತದೆ. ಇದು ಪ್ರತಿದಿನದ ಪರಿಸ್ಥಿತಿ ಆಗಿರುತ್ತದೆ.
ಬಸ್ಸು ನಿಲ್ದಾಣದ ಪಶ್ಚಿಮ ಬದಿಯ ಕಸ, ಕೊಳಕು, ಕಶ್ಮಲಗಳನ್ನು ನಿವಾರಿಸಲು ಎರಡು ದಿನದ ಸಮಯವನ್ನು ಕೇಳಿದ್ದ ಪುರಸಭಾ ಅಧಿಕಾರಿಗಳು ಇದೀಗ ನಾಲ್ಕು ದಿನ ಕಳೆದರು ಯಾವುದೇ ಬದಲಾವಣೆ ಕಂಡುಬರುತ್ತಿಲ್ಲ.
ಪ್ರಸ್ತುತ ಶೀಟ್ ಗಳನ್ನು ಸರಿಪಡಿಸುವ ಕೆಲಸವನ್ನು ಪ್ರಾರಂಭಿಸಲಾಗಿದ್ದು ಮುಖ್ಯರಸ್ತೆಯ ಹೊಂಡ ಗುಂಡಿಗಳು ಮಾತ್ರ ಮುಚ್ಚಲ್ಪಟ್ಟಿರುತ್ತವೆ. ಉಳಿದಂತೆ ಬಸ್ಸು ನಿಲ್ದಾಣದಿಂದ ಹೊರಕ್ಕೆ ಹೋಗುವ ರಸ್ತೆಯಲ್ಲಿ ಕಂಡು ಬರುತ್ತಿರುವ ದೊಡ್ಡ ದೊಡ್ಡ ಕೊಂಡಗಳು, ಏಕಮುಖ ರಸ್ತೆಯಲ್ಲಿರುವ ಹೊಂಡಗಳು ಹಾಗೆಯೇ ಇವೆ. ಅವುಗಳ ನಿವಾರಣೆಗಾಗಿ ಕಾಯಲಾಗುತ್ತಿದೆ.
ಈ ಬಗ್ಗೆ ಪುರಸಭೆಯವರು, ಪೋಲಿಸ್ ಇಲಾಖೆ, ಹಾಗೂ ನಾಗರಿಕರು ತಕ್ಷಣ ಎಚ್ಚೆತ್ತು ಕೊಳ್ಳಬೇಕಾಗಿದೆ. ಬಸು ನಿಲ್ದಾಣದ ಪರಿಸ್ಥಿತಿಯ ಬಗ್ಗೆ ಈಗಾಗಲೇ ಒಂದು ಸಮಿತಿ ರಚನೆಯಾಗಿದ್ದು ಪ್ರತಿಭಟನೆಯ ಮಾತುಕತೆ ನಡೆಯುತ್ತಿದೆ ಎಂಬುದಾಗಿ ಬಲಮೂಲಗಳಿಂದ ತಿಳಿದುಬಂದಿರುತ್ತದೆ.