ಮಂಗಳೂರು ಹಂಪನಕಟ್ಟೆಯ ಮಂಗಳೂರು ಜ್ಯುವೆಲರ್ಸ್ ಚಿನ್ನದ ಮಳಿಗೆಯ ನೌಕರ ಅತ್ತಾವರ ನಿವಾಸಿ 50ರ ರಾಘವೇಂದ್ರ ಆಚಾರ್ಯ ಎಂಬವರನ್ನು ಶುಕ್ರವಾರ ನಾಲ್ಕು ಗಂಟೆಗೆ ತುಸು ಮೊದಲು ಯಾರೋ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಅಂಗಡಿ ಮಾಲಿಕ ಕೇಶವ ಆಚಾರ್ಯ ಮಧ್ಯಾಹ್ನ ಊಟಕ್ಕೆ ಹೋಗಿದ್ದರು. ಮೂರು ಗಂಟೆ ನಲವತ್ತು ನಿಮಿಷಕ್ಕೆ ಅಂಗಡಿ ಎದುರು ಬೈಕ್ ನಿಂತಿರುವುದನ್ನು ಕಂಡ ಕೇಶವರು ಫೋನ್ ಮಾಡಿದ್ದಾರೆ. ನನ್ನನ್ನು ಯಾರೋ ಅಪರಿಚಿತ ಇರಿಯಿತ್ತಿದ್ದಾನೆ ಎಂಬ ಕೂಗು. ಕೂಡಲೆ ನೆತ್ತರು ಸುರಿಯುತ್ತಿದ್ದ ರಾಘವೇಂದ್ರ ಆಸ್ಪತ್ರೆಗೆ ಒಯ್ಯುವಾಗಲೆ ಸಾವಿಗೀಡಾದರು.

ಕಮಿಶನರ್ ಎನ್. ಶಶಿಕುಮಾರ್, ಡಿಸಿಪಿ ಅನ್ಬುಕುಮಾರ್ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದರು. 

ಚಾಕು ಇರಿತಕ್ಕೆ ಇಪ್ಪತ್ತು ನಿಮಿಷ ಮೊದಲು ಮಾಸ್ಕ್ ಧರಿಸಿ ಒಬ್ಬ ವ್ಯಕ್ತಿ ಒಳಗೆ ಬಂದಿದ್ದಾನೆ. ಆತ ಯಾರು ಎಂದು ಇನ್ನಷ್ಟೆ ತನಿಖೆ ಆಗಬೇಕಾಗಿದೆ. ಕೆಲವು ಚಿನ್ನಾಭರಣಗಳು ವ್ಯತ್ಯಾಸವಾಗಿದ್ದು, ಅವುಗಳ ಲೆಕ್ಕ ಸಹ ಪರಿಶೀಲಿಸಬೇಕಾಗಿದೆ.