ವಿಶೇಷ ವರದಿ ಸುದೀಪ್ ಡಿಸೋಜ ಕಿನ್ನಿಗೋಳಿ

ಕಿನ್ನಿಗೋಳಿ: ಸಾವಿರಾರು ಕಿಲೋಮೀಟರ್ ಸೈಕಲ್ ನಿಂದ ಇಡೀ ದೇಶದ  ಗಡಿಭಾಗ ಮತ್ತು ಕರಾವಳಿ ಕರ್ನಾಟಕದ ಕಡಲು ತೀರ  ಹಾಗೂ ಅನೇಕ ಭಾಗಗಳಲ್ಲಿ  ತಿರುಗಾಟ ಮಾಡಲಿದ್ದಾರೆ,  ಪ್ರಸ್ತುತ ಕಿನ್ನಿಗೋಳಿ ಸಮೀಪದ ಐಕಳಕ್ಕೆ ತಲುಪಿದ್ದು ಹಾಗಾದರೆ ನೀವು ಯಾರು ಅಂತ ಕೇಳುತ್ತೀರಾ ಅವರೇ ಪಂಜಾಬ್ ಮೂಲದ ಇಬ್ಬರು ಯೂಟ್ಯೂಬರ್ ಆಗಿರುವಂತಹ ಗುರುವಂದರ್ ಮತ್ತು ವಿಕಾಸ್.

ಅವರು ಪಂಜಾಬಿನಿಂದ ಸಪ್ಟೆಂಬರ್ 24, 2022 ರಂದು  ಪ್ರಾರಂಭಿಸಿದ್ದು  ಈಗಾಗಲೇ 4 ತಿಂಗಳು ಕಳೆದಿದೆ ತಮ್ಮ ಪ್ರಯಾಣ ಮೂರು ಚಕ್ರದ ಸೈಕಲಿನಲ್ಲಿ ಪ್ರಯಾಣಿಸುತಿದ್ದಾರೆ ಕಳೆದ ಎರಡು ದಿನಗಳ ಹಿಂದೆ ಪಡುಬಿದ್ರಿಗೆ ತಲುಪಿದ್ದಾರೆ ಅವರು ಪ್ರಸ್ತುತ ಎರಡು ದಿನಗಳ ಕಾಲ ಐಕಳಭಾವ ಜೋಡುಕರೆ ಕಂಬಳ ವೀಕ್ಷಣೆಗೆ ಬಂದಿದ್ದು ಅಲ್ಲಿ ಉಳಿದುಕೊಳ್ಳಲಿದ್ದಾರೆ.

ಅವರು ಸರಿಸುಮಾರು ಒಂದು ವರ್ಷದಿಂದ ಎರಡು ವರ್ಷಗಳ ಕಾಲ ಸೈಕಲಿನಿಂದಲೇ ಇಡೀ ದೇಶ ಗಡಿಭಾಗಗಳು ಪ್ರಯಾಣಿಸಲಿದ್ದಾರೆ ಇಲ್ಲಿಂದ ಇನ್ನು ಮುಂದೆ ಅವರು ಕೇರಳ ತಮಿಳುನಾಡು ಛತ್ತೀಸ್ ಗಡ್ ಮತ್ತಿತರ ರಾಜ್ಯಗಳಿಗೆ ಪ್ರಯಾಣಿಸಲಿದ್ದಾರೆ.

ದೇಶದಲ್ಲಿ ಪ್ರಥಮ ಬಾರಿಗೆ ಮೂರು ಚಕ್ರದ ಸೈಕಲ್ ನಲ್ಲಿ ಇಡೀ ದೇಶವನ್ನು ಸುತ್ತುತ್ತಿರುವವರೇ ಗುರುವೇಂದರ್ ಮತ್ತು ವಿಕಾಸ್ ಅವರು ಇಷ್ಟರವರೆಗೆ ಯಾರು ಮೂರು ಚಕ್ರದ ಸೈಕಲಿನಲ್ಲಿ ಪ್ರಯಾಣಿಸಿದು ಇಲ್ಲ.

ಅವರ  ಗಾಡಿಯಲ್ಲಿ ಪ್ರಯಾಣಿಸಿದರೆ ಅದರಿಂದ ಬರುವ ಹೊಗೆ ಪರಿಸರಕ್ಕೆ ಹಾನಿ ಮಾಡುತ್ತದೆ ಮತ್ತು ಮನುಷ್ಯರಿಗೆ ಹಾನಿಕರವಾಗುವುದರಿಂದ ಜಾಗೃತಿ ಮೂಡಿಸು ಅಭಿಯಾನದಿಂದ ಅವರು ಮೂರು ಚಕ್ರದ ಸೈಕಲ್ ನಿಂದ ತಮ್ಮ ಪ್ರಯಾಣವನ್ನು ಮಾಡುತ್ತಿದ್ದಾರೆ ಮಾತ್ರವಲ್ಲದೆ ಆ  ರಾಜ್ಯ ಮತ್ತು ಜಿಲ್ಲೆಯ  ಸಾಂಸ್ಕೃತಿಕ ಮತ್ತು ಧಾರ್ಮಿಕ ವಿಚಾರಗಳು ಮತ್ತು ಅಲ್ಲಿಯ ಸ್ಥಳೀಯ ಭಾಷೆ ಇದನ್ನೆಲ್ಲಾ ಪಂಜಾಬಿ ಭಾಷೆಯಲ್ಲಿ ಚಿತ್ರೀಕರಣ ಮಾಡಿ ಅದರ ಡಾಕ್ಯುಮೆಂಟ್ ಮಾಡುತ್ತಿದ್ದಾರೆ ಅಷ್ಟೇ ಅಲ್ಲದೆ ತಾವು ಪ್ರಯಾಣಿಸುವ ಮತ್ತು ನೋಡಿರುವ ಪರಿಸರದ ಬಗ್ಗೆ ವಿಲೋಗ್ ಮಾಡಿ ಯೂಟ್ಯೂಬ್ ನಲ್ಲಿ ತಮ್ಮದೇ ಆದ  traveling vikk  ಮತ್ತು ginda thali ಚಾನೆಲ್ ನಲ್ಲಿ  ಹಾಕುತ್ತಾರೆ. 

ಅವರು ಪ್ರತಿ ದಿನ ಸರಿಸುಮಾರು 70 ರಿಂದ 80 ಕಿಲೋ ಮೀಟರ್ ಸೈಕಲ್ ನಿಂದಲೇ ಪ್ರಯಾಣಿಸುತ್ತಿದ್ದಾರೆ.

ಅವರೇ ತಮ್ಮ ಊರಿನಲ್ಲಿ ಈ ಮೂರು ಚಕ್ರದ ಸೈಕಲ್  ಅನ್ನು ವೆಲ್ಡರ್ ಮೂಲಕ ತಮಗೆ ಬೇಕಾದ ಶೈಲಿಯಲ್ಲಿ ತಯಾರಿಸಿದ್ದಾರೆ ಅದರಲ್ಲಿ ಮೊದಲು ಸೋಲಾರ್ ಅಳವಡಿಕೆ ಮಾಡಿದ್ದು ಬರುವ ದಾರಿಯಲ್ಲಿ ಅದು ತುಂಬಾ ಭಾರವಾಗಿದ್ದು ಸೈಕಲ್ ಸವಾರಿ ಮಾಡಲು ಕಷ್ಟಕರವಾಯಿತು ಆದ ಕಾರಣದಿಂದ ಅವರು ಸೋಲಾರ್ ತೆಗಿಯಬೇಕಾಯಿತು. ತಮ್ಮ ಜೊತೆ ಬರುವ ಹೊತ್ತಿಗೆ ಮೊಬೈಲಿಗೆ ಬೇಕಾದ ಚಾರ್ಜಿಂಗ್ ಪವರ್ ಬ್ಯಾಂಕ್ ಅಡುಗೆಗೆ ಬೇಕಾದ ಪಾತ್ರೆಗಳು ಅಡುಗೆ ತಯಾರಿ ಮಾಡಲು ಬೇಕಾದ ಬೆಂಕಿ ಒಲೆ, ಬಟ್ಟೆ, ನೀರು, ನಿಲ್ಲಲು ಬೇಕಾದ ಟೆಂಟ್, ಟಯರ್ ಪಂಚರ್, ಟಯರಿಗೆ ಗಾಳಿ ಜಿಂಜಲು ಬೇಕಾದ ಏರ್ ಪಂಪ್ ಇತ್ಯಾದಿ ವಸ್ತುಗಳನ್ನು ತಮ್ಮ ಜೊತೆ ಇಟ್ಟಿದ್ದಾರೆ ಮಾತ್ರವಲ್ಲದೆ ಅವರು ಒಬ್ಬ ಒಳ್ಳೆಯ ಚಿತ್ರ ಬಿಡಿಸುವವರು ಆಗಿರುತ್ತಾರೆ ಅದಕ್ಕೆ ಬೇಕಾದ ಪೇಪರ್ ಮತ್ತು ಸ್ಟ್ಯಾಂಡ್ ತಮ್ಮ ಜೊತೆ ಯಾವಾಗಲೂ ಇರುತ್ತದೆ ಎಂದು ತಿಳಿಸಿದರು.

ಈಗಾಗಲೇ ತಮಗೆ ದಿನನಿತ್ಯ 500 ರೂಪಾಯಿಯಿಂದ 600 ಯು ಖರ್ಚು ವೆಚ್ಚ ಇದೆ ಎಂದು ತಿಳಿಸಿದರು.