ಮಂಗಳೂರು: ಎರಡು ತಿಂಗಳುಗಳಿಂದ ಮಂಗಳೂರಿನಲ್ಲಿ ವಾಸವಿದ್ದ 23ರ ಸುಮಿತಾ ರಾಣಿ ಸರ್ಕಾರ್ ಮತ್ತು 6ರ ರಿಯಾ ನಾಮಾ ಎಂಬ ತಾಯಿ ಮಗಳು ಮೇ 23ರಿಂದ ಕಾಣೆಯಾಗಿರುವುದಾಗಿ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ತ್ರಿಪುರಾ ರಾಜ್ಯದ ರಿಪನ್ ನಾಮಾ ಎರಡು ತಿಂಗಳ ಹಿಂದೆ ಮಂಗಳೂರಿಗೆ ಬಂದು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಮೊನ್ನೆ ಕೆಲಸ ಮುಗಿಸಿ ಮನೆಗೆ ಬಂದಾಗ ಮಡದಿ ಮಗಳು ಇರಲಿಲ್ಲ. ಎರಡು ದಿನ ಹುಡುಕಿ ದೂರು ನೀಡಿರುವುದಾಗಿ ರಿಪನ್ ಹೇಳಿದ್ದಾರೆ.