ಮುಂಬಯಿ:  ಮುಂಬೈಯ ಮತ್ತೋರ್ವ ಕ್ರೀಡಾಭಿಮಾನಿ, ಫುಟ್ಬಾಲ್ ಪ್ಯಾನ್, ಕರ್ನಾಟಕ ಕರಾವಳಿಯ ಬೆಳ್ತಂಗಡಿ ಗರ್ಗಾಡಿ ಮೂಲತಃ ಆಲ್ವಿನ್ ಸಿಕ್ವೇರಾ (ಓರ್ಲೆಮ್, ಮಲಾಡ್) ಇವರು ಕಳೆದ ಶುಕ್ರವಾರ ದೊಹಾ ಕತಾರ್ ಸೇರಿ ಮುಖತಃ ಫಿಫಾ ಫುಟ್ಬಾಲ್ ವರ್ಲ್ಡ್ ಕಪ್ ನ ಫ್ಯಾನ್‍ಫೆಸ್ಟಿವಲ್‍ನಲ್ಲಿ ಬ್ರೆಜಿಲ್ ಮತ್ತು ಕ್ರೊಯೇಷಿಯಾ ಪಂದ್ಯಾವಳಿಯನ್ನು ವೀಕ್ಷಿಸಿದರು. ಎಎಲ್ ಬೇಟ್ ಸ್ಟೇಡಿಯಂ ಫ್ರಾನ್ಸ್ ಮತ್ತು ಇಂಗ್ಲೆಂಡ್‍ನ ನೇರ ಕ್ವಾರ್ಟರ್ ಫೈನಲ್ ವೀಕ್ಷಿಸಿ ತನ್ನ ಆಸಕ್ತ ಫುಟ್ಬಾಲ್ ಆಟವನ್ನು ಕಣ್ಣಾರೆ ಕಂಡು ಆನಂದಿಸಿದರು.  ತನ್ನ ಜೊತೆಗೆ ಸುಪುತ್ರ ಮಾ. ಆಷ್ಟನ್ ಸಿಕ್ವೇರಾ ಸಾಥ್ ನೀಡಿದ್ದರು.

ಆಲ್ವಿನ್ ಜೊತೆಗೆ ಸ್ಟೀವನ್ ಡಿಸೋಜಾ, ಶಾರ್ಲೆಟ್ ಡಿಸೋಜಾ, ಜೇಡನ್ ಡಿಸೋಜಾ, ಟ್ರೇಜಾ ಡಿಸೋಜಾ, ನಿಕೋಲಸ್ ಡಿಸೋಜಾ, ರಾಯಾನ್ ಡಿಸೋಜಾ ಮತ್ತು ಅರ್ಲ್ ಡಿಸೋಜಾ ಇವರೂ ಜೊತೆಗೂಡಿ ಸ್ಟೇಡಿಯಂನಲ್ಲಿ ಕುಣಿದು ಕುಪ್ಪಳಿಸಿ ಮೋಜಿನ ಆಟವನ್ನು ಆನಂದಿಸಿದ್ದಾರೆ.

News and Photos By Rons Bantwal