ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮಾರ್ಚ್ 6 ರಂದು ಪುತ್ತೆ ಸೋಮನಾಥೇಶ್ವರನ ಹಾಗೂ ಮಹಿಷಮರ್ಧಿನಿ ಅಮ್ಮನವರ ಸನ್ನಿಧಾನದಲ್ಲಿ ಏಕಕಾಲಕ್ಕೆ ಉಷಾಕಿರಣ ಮೂಡುವುದಕ್ಕೆ ಮೊದಲೇ ಪಂಚಾಮೃತ, ಪರಿಕಲಶ ಅಭಿಷೇಕಗಳು ಜರುಗಿತು. 

ತರುವಾಯ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಹತೋಭಾರ ಸೋಮನಾಥನಿಗೆ ಹಾಗೂ ಮಹಿಷಮರ್ಧಿನಿ ಅಮ್ಮನವರಿಗೆ ಬ್ರಹ್ಮಕಲಶೋತ್ಸವ ನಡೆಯಿತು. ಮಹಾಪೂಜೆ, ಅವಸೃತ ಬಲಿ, ಪಲ್ಲ ಪೂಜೆಗಳ ತರುವಾಯ ಮಹಾ ಅನ್ನಸಂತರ್ಪಣೆಯಲ್ಲಿ ಲಕ್ಷಾಂತರ ಭಕ್ತರು ಪ್ರಸಾದ ಸ್ವೀಕರಿಸಿದರು.