ಬೆಂಗಳೂರು ಹೊರ ವಲಯದ ರೈಲು ಹಳಿಯಲ್ಲಿ ಮುಂಡ, ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ಸರಕು ಸಾಗಣೆ ಲಾರಿಯಲ್ಲಿ ಪತ್ತೆಯಾದ ರುಂಡದ ರಹಸ್ಯ ಭೇದಿಸಿದ ಪೋಲೀಸರು ಬೆಂಗಳೂರಿನಲ್ಲಿ ಕೆಎಸ್ಆರ್‌ಟಿಸಿ ಚಾಲಕ 42ರ ಎಂ. ಬಿ. ಬಾಲಚಂದ್ರ ಎಂಬಾತನನ್ನು ಬಂಧಿಸಿದ್ದಾರೆ.
ಕೊಲೆಯಾಗಿರುವ ವೃದ್ಧೆ ಮಂಡ್ಯ ಜಿಲ್ಲೆಯ ತೂಬಿನಗೆರೆಯ ನಿಂಗಮ್ಮ. ಈಕೆಯ ಮಗ ಸತ್ತಿದ್ದು ಸೊಸೆ ಸದಾ ತೊಂದರೆ ಕೊಡುತ್ತಿದ್ದಳಂತೆ. ತುಮಕೂರು ಮೂಲದ ಬಾಲಚಂದ್ರ ಮತ್ತು ಈ ವೃದ್ಧೆಯ ಸೊಸೆ ಬೆಂಗಳೂರಿನಲ್ಲಿ ವಾಸಿಸುತ್ತ ಪರಿಚಿತರು.
ವೃದ್ಧೆ ಹೊಡೆತ ತಿಂದು ಸತ್ತಾಗ ಸೊಸೆ ತನ್ನ ಗೆಳೆಯ ಬಾಲಚಂದ್ರನಿಗೆ ಹೇಳಿ, ಹೆಣದ ತಲೆ ಕಡಿದು ಬೇರ್ಬೇರೆ ಕಡೆ ವಿಲೇವಾರಿ ಮಾಡಿಸಿದ್ದಾಳೆ. ಸೊಸೆ ಪರಾರಿಯಾಗಿದ್ದು, ಬಾಲಚಂದ್ರನನ್ನು ಬಂಧಿಸಿದ ರೈಲು ಮತ್ತು ಅಪರಾಧ ವಿಭಾಗದ ಪೋಲೀಸರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ.