ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಟ್ರಾಕ್ಟರ್‌ನಲ್ಲಿ ಸಂಸತ್ತಿಗೆ ಬಂದು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯ ಮಾಡಿದರು.
ವಿವಾದಿತ ಕೃಷಿ ಕಾಯ್ದೆಗಳು ಉದ್ಯಮಿಗಳಿಗೆ ಉಪಯುಕ್ತ ಹೊರತು ರೈತರಿಗಲ್ಲ ಎಂದ ಅವರು ಕೂಡಲೆ ಅವನ್ನು ಹಿಂದೆ ಪಡೆಯುವಂತೆ ಒತ್ತಾಯ ಪಡಿಸಿದರು.
ಸಂಸದರಾದ ಪ್ರತಾಪ್ ಸಿಂಗ್ ಬಜ್ವಾ, ರವನೀತ್ ಸಿಂಗ್, ದೀಪಿಂದರ್ ಸಿಂಗ್ ಮೊದಲಾದವರು ಜೊತೆಗಿದ್ದು ಮೋದಿ ಸರಕಾರದ ವಿರುದ್ಧ ಘೋಷಣೆ ಕೂಗಿದರಲ್ಲದೆ ಪ್ಲೆಕಾರ್ಡ್ ಪ್ರದರ್ಶಿಸಿದರು.