ಮಂಗಳೂರು, ಜು 26: ಯಾರೇ ಆಗಲೀ ತನ್ನ ಮಾತೃಭಾಷೆ ಹಾಗೂ ಮಾತೃಭೂಮಿಗಾಗಿ‌ ಸೇವೆ ನೀಡಿದರೆ ಅದು‌ ಸರ್ವ ಶ್ರೇಷ್ಠ ಎನಿಸಿಕೊಳ್ಳುತ್ತದೆ. ನಾವು ಈ ನೆಲದ ಹಾಗೂ ಭಾಷೆಯ ಆಶ್ರಯದಲ್ಲಿ ನಮ್ಮ ಬೇಕು ಬೇಡಗಳನ್ನು ಪೂರೈಸುತ್ತೇವೆ. ಅದನ್ನು ಗೌರವ ಪೂರ್ವಕ ನಮನ‌ ಮಾಡುವುದು  ಪುಣ್ಯದ‌‌ ಕೆಲಸ ಎಂದು ಅಲೋಶಿಯಸ್ ಕಾಲೇಜಿನ ರೆಕ್ಟರ್ ಆದ ಫಾದರ್ ಮೆಲ್ವಿನ್ ಪಿಂಟೊ ನುಡಿದರು.

ಅವರು‌ ಕೊಂಕಣಿ ನಾಟಕ ಸಭಾದ ನೂತನ ಅಂತರ್ಜಾಲ ತಾಣದ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಯಾಗಿ ಬಂದ ವಕೀಲರು ಹಾಗೂ‌ ದಕ‌ ಕಾಂಗ್ರೆಸ್ ಪಕ್ಷದ ಜಿಲ್ಲೆಯ ಮಹಿಳಾ ಅದ್ಯಕ್ಷರಾದ ಶಾಲೆಟ್‌ ಪಿಂಟೊ ಮಾತನಾಡಿ ಕಳೆದ ಎಪ್ಪತ್ತು ವರ್ಷಗಳ ಕಾಲ ಸೇವೆ ಮಾಡಿದ ಜನರು ಲೋಕದಲ್ಲಿ ಹರಡಿರಬಹದು. ಅವರನ್ನು ಸಂಪರ್ಕಿಸಲು ಇದು ಒಳ್ಳೆಯ ಮಾರ್ಗ ಆಗಿದೆ ಎಂದರು.

ಗೌರವ ಅತಿಥಿಯಾದ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರೇಟ್ ಪ್ರವೀಣ್ ಮಾರ್ಟಿಸ್ ಮಾತನಾಡಿ ಯೇಸು ಸಭೆಯ ಮೂಲದ ಈ ಕೊಂಕಣಿ ನಾಟಕ ಸಭಾವು ಡೋನ್ ಬಾಸ್ಕೊ ಹಾಲ್ ಮುಖಾಂತರ ಮಾಡಿದ ಸೇವೆ ಕಲೆಯನ್ನು ಉತ್ತುಂಗದಲ್ಲಿ ನೆಲೆಸಲು ಪೂರಕ ಆಗಿದೆ ಎಂದರು.

ಮೊದಲು ಕೊಂಕಣಿ ನಾಟಕ ಸಭಾದ ಅದ್ಯಕ್ಷರಾದ ಫಾದರ್ ಪಾವ್ಲ್ ಮೆಲ್ವಿನ್ ಡಿಸೋಜ ಸ್ವಾಗತಿಸಿದರು. ಉಪಾಧ್ಯಕ್ಷ ‌ಲಿಸ್ಟನ್‌ ಡಿಸೋಜ ಪ್ರಾಸ್ತಾವಿಕ ಮಾತನಾಡಿ ನವೀಕರಣದ ವಿವರಣೆ ನೀಡಿದರು. ಕಾರ್ಯದರ್ಶಿ ಪ್ಲೊಯ್ಡ ಡಿಮೆಲ್ಲೊ ವಂದಿಸಿದರು. ಪತ್ರಕರ್ತ ರೇಮಂಡ್ ಡಿಕೂನಾ ನಿರೂಪಣೆ ಮಾಡಿದರು. ಆಡಳಿ ಖಜಾಂಚಿ ಜೆರಾಳ್ಡ್ ಕೊನ್ಸೆಸೊ ಹಾಗೂ ‌ಸಹ ಕಾರ್ಯದರ್ಶಿ ಪ್ರವೀಣ್ ರೊಡ್ರಿಗಸ್ ಸಹಕರಿಸಿದರು.

Do visit website: http://www.konkaninataksabha.com/