ವಿದ್ಯಾಗಿರಿ:  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮೂಡಬಿದಿರೆ ರೋಟರಿ ಕ್ಲಬ್‍ನ ಸಹಯೋಗದಲ್ಲಿ ಪ್ರತಿಷ್ಠಾನದ ಎಲ್ಲಾ ಸಂಸ್ಥೆಗಳ ವಿದ್ಯಾರ್ಥಿನಿಯರಿಗೆ ಗರ್ಭಕಂಠದ ಕ್ಯಾನ್ಸರ್ ಮತ್ತು ಎಚ್‍ಪಿವಿ ಲಸಿಕೆ  ಕುರಿತು ಜಾಗೃತಿ ಕಾರ್ಯಕ್ರಮವನ್ನು ಅಕ್ಟೋಬರ್15 ರಿಂದ 22ರವರೆಗೆ ಹಮ್ಮಿಕೊಂಡು ಯಶಸ್ವಿಗೊಳಿಸಲಾಯಿತು.   

ಆಳ್ವಾಸ್ (ಸ್ವಾಯತ್ತ) ಪದವಿ ವಿದ್ಯಾರ್ಥಿನಿಯರಿಗೆ ಎಚ್‍ಪಿವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಲಸಿಕೆ ಜಾಗೃತಿ ಕುರಿತು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಡಾ. ಮರಿಯಾ ನೆಲ್ಲಿಯನಿಲ್ ಮತ್ತು  ಡಾ ಸುಶಾಂತ ಪೆರ್ಡೂರು, ಆಳ್ವಾಸ್ ಆಯುರ್ವೇದ ವಿದ್ಯಾರ್ಥಿನಿಯರಿಗೆ ಡಾ ರಮ್ಯಾ ಎನ್ ಆರ್, ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಾ ಸುಪ್ರಜ್ಯಾ ಶೆಟ್ಟಿ ಮತ್ತು  ಡಾ ಸೌಧ, ನ್ಯಾಚುರೋಪತಿ ಹಾಗೂ ಹೋಮಿಯೋಪತಿ ವಿದ್ಯಾರ್ಥಿನಿಯರಿಗೆ ಡಾ ಅದಿತಿ ಶೆಟ್ಟಿ, ಫಿಸಿಯೋಥೆರಫಿ ಮತ್ತು ಅಲೈಡ್ ಹೆಲ್ತ್ ಸೈನ್ಸ್‍ಸ್ ವಿದ್ಯಾರ್ಥಿನಿಯರಿಗೆ ಡಾ. ನಿಶಿತ ಶೆಟ್ಟಿ ಯಾನ್ ಫೆರ್ನಾಂಡಿಸ್ , ಬಿಪಿಎಡ್, ಎಂಪಿಎಡ್, ಬಿ.ಎಡ್ ಹಾಗೂ ಆಳ್ವಾಸ್ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಡಾ. ಹನಾ ಶೆಟ್ಟಿ, ನರ್ಸಿಂಗ್  ಕಾಲೇಜಿನ ವಿದ್ಯಾರ್ಥಿಗಳಿಗೆ ಡಾ ಸಹನಾ ಜಿ, ಡಾ ಮಾನಸಿ ಪಿ ಎಸ್ ರವರಿಂದ ಜಾಗೃತಿ ಕಾರ್ಯಕ್ರಮ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ಒಟ್ಟು 5000ಕ್ಕೂ ಅಧಿಕ ವಿದ್ಯಾರ್ಥಿನಿಯರು ಜಾಗೃತಿ ಕಾರ್ಯಕ್ರಮದ ಫಲಾನುಭವಿಗಳಾಗಿದ್ದಾರೆ. ಮುಂದಿನ ದಿನಗಳಲ್ಲಿ ಎಚ್‍ಪಿವಿ ಲಸಿಕೆಯನ್ನು ಕಡಿಮೆ ಬೆಲೆಯಲ್ಲಿ ವಿತರಿಸುವ ಯೋಜನೆಯು ಇವರ ಮುಂದಿದೆ.   

ಮೂಡಬಿದಿರೆಯ ರೋಟರಿ ಕ್ಲಬ್ ಗರ್ಭಕಂಠದ ಕ್ಯಾನ್ಸರ್ ಮತ್ತು ಎಚ್‍ಪಿವಿ ಲಸಿಕೆ ಕುರಿತು ಜಾಗೃತಿಯನ್ನು ಜಿಲ್ಲಾ ಯೋಜನೆಯಾಗಿ ಆಯೋಜಿಸಿದ್ದು, ಈಗಾಗಲೇ 15 ಕ್ಕೂ ಹೆಚ್ಚು ಜಾಗೃತಿ ಕ್ಯಾಂಪ್‍ಗಳನ್ನು ನಡೆಸಿದೆ.  ಈ ವರ್ಷದ ಕೊನೆಯಲ್ಲಿ ರೋಟರಿ  3181 ಜಿಲ್ಲೆಯಲ್ಲಿ 100 ಕ್ಕೂ ಹೆಚ್ಚು ಜಾಗೃತಿ ಶಿಬಿರಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಮೂಡಬಿದಿರೆಯ ರೋಟರಿ ಕ್ಲಬ್‍ನ ಅಧ್ಯಕ್ಷ ಡಾ ಹರೀಶ್ ನಾಯಕ್ ತಿಳಿಸಿದರು. 

ಗರ್ಭಕಂಠದ ಕ್ಯಾನ್ಸರ್ ಮತ್ತು ಎಚ್‍ಪಿವಿ ಲಸಿಕೆ  ಕುರಿತು ಜಾಗೃತಿ ಕಾರ್ಯಕ್ರಮವು ಆಳ್ವಾಸ್ ಆರೋಗ್ಯ ಕೇಂದ್ರದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಹನಾ ಶೆಟ್ಟಿ, ಮೂಡಬಿದಿರೆಯ ರೋಟರಿ ಕ್ಲಬ್‍ನ ಅಧ್ಯಕ್ಷ ಡಾ ಹರೀಶ್ ನಾಯಕರ ಮುತುವರ್ಜಿಯಲ್ಲಿ ಜರುಗಿದೆ.