ಮಂಗಳೂರು:- ಮಂಗಳೂರು ಮಹಾನಗರ ಪಾಲಿಕೆಯ ಪ್ರತಿ ಪಕ್ಷದ ನಾಯಕರಾಗಿ ಇರುವ ಕಾಂಗ್ರೆಸ್ ಪಕ್ಷದ ಅಬ್ದುಲ್ ರೌಫ್ ಅವರು ಬುಧವಾರ ನವೆಂಬರ್ 11 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ "ಬಿಜೆಪಿ ಕೈಯಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಎನ್ನುವುದು ಜನಸಾಮಾನ್ಯರಿಗೆ ತೊಂದರೆ ಕೊಡುವುದಾಗಿದೆ" ಎಂದರು.

ಆರಂಭದಲ್ಲಿ ಮಾಜೀ ಮಹಾಪೌರ ಶಶಿಧರ ಹೆಗ್ಡೆಯವರು ಮುನ್ನುಡಿ ಮಾತಾಡಿ "2016 ರಲ್ಲಿ ನಮ್ಮ ಜೆಸಿಂತಾರು ಮೇಯರ್ ಇದ್ದಾಗ 3ನೇ ಹಂತದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಘೋಷಣೆ ಆಯಿತು. ಇಂದು ಎಲ್ಲೆಡೆ ಟ್ರಾಫಿಕ್ ಸಮಸ್ಯೆ ಆಗುತೆ ಈಗಿನ ಆಳುವವರು ಮಾಡಿದ್ದಾರೆ" ಎಂದರು.

ಅಬ್ದುಲ್‌ ರೌಫ್ ಅವರು ಮುಂದುವರಿದು "ಒಂದೇ ಸಲ ಹತ್ತಾರು ಕಡೆ ಅಗೆದು ಹಾಕಿ ಜನರಿಗೆ ತೊಂದರೆ ಕೊಡುವ ಕೆಲಸವಷ್ಟೆ ಈಗ ನಡೆದಿದೆ. ಯಾವುದೇ ಅರ್ಹತೆ ಇಲ್ಲದವರಿಗೆ ಕಾಂಟ್ರಾಕ್ಟ್ ನೀಡಲಾಗಿದೆ" ಎಂದು ರಸ್ತೆಗಳನ್ನು ಸಾಲಾಗಿ ಹೆಸರಿಸಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಗಳಾದ ಜೆಸಿಂತಾ ಆಲ್ಫ್ರೆಡ್,  ಭಾಸ್ಕರ ಕೆ,  ಎ. ಸಿ. ವಿನಯ ರಾಜ್,  ಅಬ್ದುಲ್ ಲತೀಫ್,  ಕೇಶವ ಮರೋಳಿ, ಸಂಶುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.