ಬಂಟ್ವಾಳ: ವೆಲಂಕಣಿ ಮಾತೆಯ ದೇವಾಲಯ, ಫರ್ಲಾ ಬಂಟ್ವಾಳ ಇದರ ವಾರ್ಷಿಕ ಜಾತ್ರಾ ಮಹೋತ್ಸವದ ತಯಾರಿಗಾಗಿ 9 ದಿನಗಳ ನೊವೆನಾ ಪ್ರಾರ್ಥನೆಗೆ ವಂ. ಗುರು. ಚಾರ್ಲ್ಸ್ ಫೆರ್ನಾಂಡಿಸ್ ರವರು ವೆಲಂಕಣಿ ಮಾತೆಯ ಧ್ವಜರೋಹಣ ಮಾಡುವ ಮೂಲಕ ಚಾಲನೆಯನ್ನು ನೀಡಿದರು. ತದನಂತರ ನೊವೆನಾ ಪ್ರಾರ್ಥನೆ ಹಾಗೂ ದಿವ್ಯ ಬಲಿ ಪೂಜೆಯನ್ನು ಅರ್ಪಿಸಲಾಯಿತು. ಚರ್ಚ್ ಧರ್ಮಗುರುಗಳಾದ ವಂ. ಮಾರ್ಕ್ ಡಿಸೋಜರವರು  ಭಕ್ತಾದಿಗಳಿ ಗೋಸ್ಕರ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.

ಊರ ಪರವೂರ ವೆಲಂಕಣಿ ಮಾತೆಯ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.