ಬಂಟ್ವಾಳ: ಕ್ರೀಡೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕ್ರೀಡೆಗಳಲ್ಲಿ ತೊಡಗಿಕೊಂಡ ವಿದ್ಯಾರ್ಥಿಯ ಅಧ್ಯಯನದ ಆಸಕ್ತಿಯು ಹೆಚ್ಚುತ್ತದೆ ಎಂದು ಅಧ್ಯಯನಗಳು ತಿಳಿಸಿವೆ ಎಂದು ಬಂಟ್ವಾಳ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಮಂಜುನಾಥನ್ ಎಂ.ಜಿ. ಇವರು ಅಭಿಪ್ರಾಯ ಪಟ್ಟರು.

ದ.ಕ.ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಛೇರಿ, ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ, ಎಸ್.ವಿ.ಎಸ್.ಸಮೂಹ ವಿದ್ಯಾ ಸಂಸ್ಥೆಗಳು, ವಿದ್ಯಾಗಿರಿ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲ್ ಬ್ಯಾಂಡ್ಮಿಂಟನ್ ಪಂದ್ಯಾವಳಿ -2023-24 ಅನ್ನು ಉದ್ಘಾಟಿಸಿ ಮಾತನಾಡುತ್ತಾ ಸಂಘಟಕರನ್ನು ಅಭಿನಂದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸದ್ದ ಎಸ್.ವಿ.ಎಸ್.ಸಮೂಹ ವಿದ್ಯಾಸಂಸ್ಥೆಗಳ ಆಡಳಿತಾತ್ಮಕ ಪ್ರಾಂಶುಪಾಲರಾದ ಡಾ.ಸುಯೋಗ ವರ್ಧನ್ ಡಿ.ಎಮ್. ಇವರು ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳಸಿ ಅವರು ಕ್ರಿಯಾಶೀಲರಾಗಿರುವಂತೆ ಮಾಡುವ ಉತ್ತಮ ಸಾಧನವಾಗಿದೆ ಎಂದರು ಹಾಗೂ ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಥಮಿಕ ಶಾಲಾ ಹಂತದಿಂದ ಪದವಿ ಹಂತದವರೆಗೂ ಕ್ರೀಡೆಗೆ ಪೊತ್ಸಾಹ ನೀಡುವ ಕೆಲಸವನ್ನು ವಿದ್ಯಾಸಂಸ್ಥೆಯ ಆಡಳಿತಮಂಡಳಿಯು ಮಾಡುತ್ತಿರುವುದು ಸಂತಸದ ವಿಚಾರ ಎನ್ನುತ್ತಾ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. 

ಕಾರ್ಯಕ್ರಮದಲ್ಲಿ  ಭುವನೇಶ್ ಜೆ., ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ,  ಲಿಲ್ಲಿ ಪಾಯಸ್, ಅಧ್ಯಕ್ಷರು, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ದ.ಕ., ರತ್ನಾವತಿ ಅಧ್ಯಕ್ಷರು, ತಾಲ್ಲೂಕು ದೈಹಿಕ ಶಿಕ್ಷಕರ ಸಂಘ ಬಂಟ್ವಾಳ, ನವೀನ್ ಪಿ.ಎಸ್. ಅಧ್ಯಕ್ಷರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಬಂಟ್ವಾಳ,  ಉಮಾನಾಥ ರೈ, ಅಧ್ಯಕ್ಷರು, ಸರ್ಕಾರಿ ನೌಕರರ ಸಂಘ, ಬಂಟ್ವಾಳ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಹರಿಪ್ರಸಾದ್, ಮುಖ್ಯೋಪಾಧ್ಯಾಯರು, ಎಸ್.ವಿ.ಎಸ್. ಪ್ರಾಥಮಿಕ ಶಾಲೆ, ವಿದ್ಯಾಗಿರಿ ಇವರು ಉಪಸ್ಥಿತರಿದ್ದರು. ಎಸ್.ವಿ.ಎಸ್. ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಷ್ಣುನಾರಾಯಣ ಹೆಬ್ಬಾರ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು, ಬಂಟ್ವಾಳ ಇವರು ಸ್ವಾಗತಿಸಿ,  ಆಶಾಲತಾ, ದೈಹಿಕ ಶಿಕ್ಷಣ ಶಿಕ್ಷಕಿ, ಎಸ್.ವಿ.ಎಸ್. ಆಂಗ್ಲಮಾಧ್ಯಮ ಶಾಲೆ, ವಿದ್ಯಾಗಿರಿ ಇವರು ವಂದಿಸಿದರು. ಚೈತ್ರಾ ಶೆಟ್ಟಿ ಇವರು ನಿರೂಪಿಸಿದರು. ಜಿಲ್ಲೆಯ ಏಳು ತಾಲ್ಲೂಕುಗಳಿಂದ ಒಟ್ಟು 24 ತಂಡಗಳು ಭಾಗವಹಿಸಿದ್ದವು.