ಮಂಗಳೂರು, ಜು 07: ಯಾವುದೇ ಸರ್ಚ್ ಎಂಜಿನ್ ಬಳಸಿ ಇಂಗ್ಲಿಷ್ ಮೂಲಕ ಬ್ಯಾರಿ ಲಿಪಿಯಲ್ಲಿ ಬ್ಯಾರಿ ಭಾಷೆಗೆ ಲಿಪ್ಯಂತರ ಮಾಡಲು bearyscript.in ಜಾಲ ತಾಣವನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಷಿಲ್ ಲೋಕಾರ್ಪಣೆ ಮಾಡಿದರು.

ಉಚಿತವಾಗಿ ಲಿಪ್ಯಂತರ ಜಾಲ ತಾಣ ರೂಪಿಸಿಕೊಟ್ಟ ವಿದ್ಯಾರ್ಥಿಗಳು ಮತ್ತು ರಿಜಿಸ್ಟ್ರಾರ್

ಅಧ್ಯಕ್ಷ ರಹೀಂ ಉಚ್ಚಿಲ್ ವಿವರಣೆ; ಆಲ್ವಿನ್ ಡೇಸಾ ಉಪಸ್ಥಿತಿ

ಈ ಸಂದರ್ಭದಲ್ಲಿ ಮಾತನಾಡಿದ ರಹೀಂ ಉಚ್ಚಿಲ್ ಬ್ಯಾರಿ ಭಾಷೆಗೆ ಲಿಪಿ ಇತ್ಯಾದಿ ಇಲ್ಲದಿದ್ದುದರಿಂದ ಜನಗಣತಿಯಲ್ಲಿ ಅವರ ಭಾಷೆ ಬರೆಯಲು ಅವಕಾಶವಿರಲಿಲ್ಲ. ಈಗ ಲಿಪಿ ಮೂಲಕ ಅವಕಾಶ ಪಡೆಯಲೂ ಬಹುದು. ಇಲ್ಲದಿದ್ದರೆ ತುಳು ಎಂದು ಬರೆಯಲು ಬ್ಯಾರಿ ಬಾಂಧವರಿಗೆ ತಿಳಿಸಿದ್ದೇವೆ. ಬ್ಯಾರಿ ಲಿಪಿಯ ಹೇರಿಕೆ ಇಲ್ಲ. ಕನ್ನಡ ಲಿಪಿಯಲ್ಲಿಯೇ ವ್ಯವಹಾರ ಇರುತ್ತದೆ ಎಂದು ಅವರು ಹೇಳಿದರು.

ಹೊಸ ಲಿಪಿಯಲ್ಲಿ ಲಿಪ್ಯಂತರ ಪಡೆಯಲು ಸಾಧ್ಯವಾಗುವಂತೆ ಪ್ರತಿಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದವರು ಅಲೋಶಿಯಸ್ ವಿದ್ಯಾರ್ಥಿಗಳಾದ ಯು. ಟಿ. ಮೊಹಮ್ಮದ್ ಮಶ್ಫೂಕ್ ಹುಸೈನ್, ಕೆ. ಎ. ಇಸ್ಮಾಯಿಲ್ ಶಫೀಕ್ ಮತ್ತು ಮೆಲ್ರಾಯ್ ಪಿಂಟೋ ಅವರನ್ನು ಪರಿಚಯಿಸಲಾಯಿತು.

ಲಿಪ್ಯಂತರ ಜಾಲ ತಾಣ ಲೋಕಾರ್ಪಣೆ

ಈಗ ಯುನಿಕೋಡ್ ಇಲ್ಲದೆ ಲಿಪ್ಯಂತರ 85% ಯಶಸ್ವಿಯಾಗಿದೆ. ಯುನಿಕೋಡ್ ದೊರಕುತ್ತಲೇ ಕನ್ನಡದಿಂದ, ಕೊಲ್ಲಿ ದೇಶಗಳವರ ಒತ್ತಾಯದ ಮೇರೆಗೆ ಮಲಯಾಳಂ ಭಾಷೆಗಳಿಂದಲೂ ಬ್ಯಾರಿಗೆ ಲಿಪ್ಯಂತರ ಮಾಡುವ ಕೆಲಸ ಬೇಗನೆ ಆಗುತ್ತದೆ ಎಂದು ರಹೀ ಉಚ್ಚಿಲ್ ಹೇಳಿದರು.

ಮೊದಲಿಗೆ ರಿಜಿಸ್ಟ್ರಾರ್ ಪೂರ್ಣಿಮಾ ಅವರು ಸ್ವಾಗತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಆಲ್ವಿನ್ ಡೇಸಾ, ಅಬ್ದುಲ್ ರೆಹಮಾನ್ ಕುತ್ತೆತ್ತೂರು, ಹೈದರಾಲಿ, ಅಬೂಬಕ್ಕರ್ ಸಿದ್ದೀಕ್ ಮೊದಲಾದವರು ಉಪಸ್ಥಿತರಿದ್ದರು.