ಪ್ರಧಾನಿಗೆ ಸುನಿಲ್ ಕುಮಾರ್ ಬಜಾಲ್ ಪ್ರಶ್ನೆಗಳು
ಮಹಿಳೆಯರ ಸಿಟ್ಟಾದ ದುಮ್ಮಾನ
ಬೆಲೆಯೇರಿಕೆಯ ನೋವು
ಮಂಗಳೂರು, ಜು 07: ಮಾರ್ಕ್ಸ್‌ವಾದಿ ಕಮ್ಯೂನಿಸ್ಟ್ ಪಕ್ಷದವರು ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆ ಖಂಡಿಸಿ ಮಂಗಳೂರಿನ ಹಂಪನಕಟ್ಟೆ ವೃತ್ತದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಅಚ್ಛೇ ದಿನ್ ತರುತ್ತೇನೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರು ತನ್ನ ಮತ್ತು ತಮ್ಮ ಉದ್ಯಮಿಗಳಿಗೆ ಅಚ್ಛೇ ದಿನ್ ನೀಡಿ ಜನಸಾಮಾನ್ಯರಿಗೆ ಬೆಲೆಯೇರಿಕೆ ಕಚ್ಚುವ ದಿನಗಳನ್ನು ನೀಡಿದ್ದಾರೆ ಎಂದು ಸಿಪಿಎಂ ನಾಯಕ ಸುನೀಲ್ ಕುಮಾರ್ ಬಜಾಲ್ ಪ್ರತಿಭಟನೆಯಲ್ಲಿ ಮಾತನಾಡಿದರು.
ಕೆಂಬಾವುಟದ ಧಿಕ್ಕಾರ
ಸಂಘಟನೆಯ ಕೂಗು
ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ಜನರ ಬದುಕನ್ನು ನರಕ ಮಾಡಿವೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು ಹಾಗೂ ಪ್ಲೆಕಾರ್ಡ್ ಪ್ರದರ್ಶಿಸಿದರು.