ಕಾರ್ಕಳ: ಕಾರ್ಕಳದ ಪ್ರತಿಷ್ಠಿತ ರೋಟರಿ ಸಂಸ್ಥೆ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ 2025-26ನೆ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ Rtn PHF ಸುರೇಂದ್ರ ನಾಯಕ್ ಮತ್ತು ಕಾರ್ಯದರ್ಶಿಯಾಗಿ Rtn ರಾಘವೇಂದ್ರ ಕಾಮತ್ ಅವರು ಆಯ್ಕೆಯಾಗಿರುತ್ತಾರೆ. 

ಸಂಸ್ಥೆಯ ಖಜಾಂಚಿಯಾಗಿ Rtn PHF ಸುರೇಶ್ ನಾಯಕ್,  Rtn PHF ಉಪೇಂದ್ರ ವಾಗ್ಲೆ, ಜಂಟಿ ಕಾರ್ಯದರ್ಶಿ Rtn ಮಾಧವಿ ಕೆ, ಕ್ಲಬ್ ಸರ್ವಿಸ್ Rtn PHF ಚಿರಾಗ್ ರಾವ್, ಕಮ್ಯೂನಿಟಿ ಸರ್ವಿಸ್ Rtn PHF ಪ್ರಶಾಂತ್ ಬೆಳಿರಾಯ, ಇಂಟರ್ನ್ಯಾಷನಲ್ ಸರ್ವಿಸ್ Rtn PHF ಪ್ರಕಾಶ್ ಪೈ, ವೊಕೇಷನಲ್ ಸರ್ವಿಸ್ Rtn ಗಣೇಶ್ ಬರ್ಲಾಯ, ಯೂತ್ ಸರ್ವಿಸ್ Rtn ಪ್ರಕಾಶ್ ವಾಗ್ಲೆ, TRF Rtn ವಿನೋದ್ ಕುಮಾರ್ ಆರ್, ಐ ಟಿ & ವೆಬ್ಸೈಟ್ Rtn PHF ಶ್ರೀವರ್ಮ ಅಜ್ರಿ, ಪಬ್ಲಿಕ್ ಇಮೇಜ್ Rtn ರಮೇಶ್ ಶೆಟ್ಟಿ, ಕ್ಲಬ್ ಪ್ರೋಗ್ರಾಮ್ ಕಮಿಟಿ Rtn ಸುಬ್ರಹ್ಮಣ್ಯ ಉಪಾಧ್ಯ, ಮೆಂಬರಿಶಿಪ್ Rtn ಅಶೋಕ್ ಕಾಮತ್ ಮತ್ತು ಸಾರ್ಜೆಂಟ್ ಅಟ್ ಆರ್ಮ್ ಪ್ರಮುಖರಾಗಿ Rtn ಅಬ್ದುಲ್ ರೆಹಮಾನ್ ಆಯ್ಕೆಯಾಗಿರುತ್ತಾರೆ. ರೋಟರಿ ಪೂರ್ವ ಗವರ್ನರ್  ಡಾ. ಭರತೇಶ್ ಆದಿರಾಜ್ ಮತ್ತು  ರೋಟರಿ ಕ್ಲಬ್, ಕಾರ್ಕಳ ಪೂರ್ವಾಧ್ಯಕ್ಷರಾದ Rtn PHF ಚಂದ್ರ ಶೇಖರ್ ಹೆಗ್ಡೆ ಇವರ ಮಾರ್ಗದರ್ಶನದಲ್ಲಿ ಈ ಕ್ಲಬ್ ಏಳು ವರ್ಷ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿ 8 ನೆ ವರ್ಷಕ್ಕೆ ಪಾದಾರ್ಪಣೆ ಮಾಡಿರುತ್ತದೆ. ಪದಗ್ರಹಣ ಸಮಾರಂಭವು ಕಾರ್ಕಳ ಸರಕಾರಿ ಮಾದರಿ  ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ನಡೆಯಲಿರುವುದು. ಪದಗ್ರಹಣ ಅಧಿಕಾರಿಯಾಗಿ ನಿಟ್ಟೆ ಕ್ಯಾಂಪಸ್ ನಿಟ್ಟೆ ಯುನಿವರ್ಸಿಟಿ ನಿರ್ದೇಶಕರಾದ Rtn PHF A ಯೋಗೀಶ್ ಹೆಗ್ಡೆ ಇವರು ಪದಗ್ರಹಣ ನೆರವೇರಿಸಿಕೊಡಲಿದ್ದಾರೆ.