ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಅರಣ್ಯ ಇಲಾಖೆ ಕುಂದಾಪುರ ವಿಭಾಗ, ಮಂಗಳೂರು ವೃತ್ತ, ಹಾಗೂ ಮೂಡುಬಿದರೆ ಉಪ ವಿಭಾಗ, ಮೂಡುಬಿದಿರೆ ವಲಯದ ಸಹಯೋಗದಲ್ಲಿ ಜುಲೈ 9ರಂದು ಅಲಂಗಾರು ಸಮೀಪದ ಕಡಲ ಕೆರೆ ನಿಸರ್ಗಧಾಮದ ನೀರಿನಿಂದ ತುಂಬಿರುವ ಕೆರೆಗೆ ಮೀನು ಬಿಡುವ ಕಾರ್ಯಕ್ರಮ ಶಾಸಕ ಉಮಾನಾಥ ಕೋಟ್ಯಾನ್ ಅವರಿಂದ ನೆರವೇರಿತು. ತರುವಾಯ ಶಾಸಕರು ಸ್ವತಹ ಬೋಟಿಂಗ್ ಉದ್ಘಾಟಿಸಿ ಕೆರೆಯ ಸೌಂದರ್ಯವನ್ನು ಆಸ್ವಾದಿಸಿದರು. ಈ ಸಂದರ್ಭದಲ್ಲಿಪುರಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸ್ಥಳೀಯ ಮುಂದಾಳುಗಳು ಹಾಜರಿದ್ದರು.
ತರುವಾಯ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿ ಪ್ರವಾಸೋದ್ಯಮ ಅಭಿವೃದ್ಧಿ ರೀತಿಯಲ್ಲಿ ಕಡಲ ಕೆರೆಯನ್ನು ಅಭಿವೃದ್ಧಿಪಡಿಸುವ ಇಚ್ಛೆ ಇದೆ. ಇಡೀ ವರ್ಷ ಬೋಟಿಂಗ್ ಅನುಭವ ಎಲ್ಲರಿಗೂ ದೊರಕುವ ರೀತಿಯಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದರು. ಅದೇ ರೀತಿ ವಾಕಿಂಗ್ ಟ್ರ್ಯಾಕ್ ಕೂಡ ವ್ಯವಸ್ಥಿತವಾಗಿ ಮಾಡುವ ಆಲೋಚನೆ ಇದೆ, ಇದೆಲ್ಲದಕ್ಕೂ ಅರಣ್ಯ ಇಲಾಖೆ ಸಹಕರಿಸುತ್ತಿರುವುದು ಬಹಳ ಸಂತೋಷಕರ ಸಂಗತಿ. ಪಿಲಿಕುಳಕ್ಕಿಂತಲೂ ದೊಡ್ಡದಾದ ಈ ಕಡಲೆ ಕೆರೆ 15 ಎಕರೆ ವಿಸ್ತೀರ್ಣ ಹೊಂದಿದೆ. ಅರಣ್ಯದಲ್ಲಿ ಗಿಡ ನೆಟ್ಟು ಇದರ ಅಭಿವೃದ್ಧಿಯಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗುವ ಒಟ್ಟಿಗೆ ಮೂಡುಬಿದಿರೆಯ ಸೌಂದರ್ಯ ಇಮ್ಮಡಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ತಹಸಿಲ್ದಾರ್ ಶ್ರೀಧರ್, ತಾಲೂಕು ಪಂಚಾಯತ್ ನ ಆಡಳಿತಾಧಿಕಾರಿ ಕುಸುಮಾಧರ್, ಪುರಸಭಾ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು, ಕುಂದಾಪುರ ಎಂ.ಸಿ.ಎಫ್. ಶ್ರೀಧರ್ ಸ್ವಾಗತಿಸಿ ಟ್ರೀ ಪಾರ್ಕ್ ಮತ್ತು ಕಾಟೇಜುಗಳನ್ನು ಮಾಡುವ ಆಲೋಚನೆಯಿದ್ದು ಸದ್ಯದಲ್ಲಿಯೇ ಜಿಲ್ಲಾಧಿಕಾರಿಗಳು ಅನುಮತಿಯನ್ನು ನೀಡಿದಲ್ಲಿ ಅವೆಲ್ಲವನ್ನು ಕೂಡ ಪ್ರಾರಂಭಿಸಲಾಗುವುದು ಎಂದು ಅರಣ್ಯ ಇಲಾಖೆಯ ವತಿಯಿಂದ ಧನ್ಯವಾದ ಸಲ್ಲಿಸಿದರು.