ಮಂಗಳೂರು: ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನವೀಕರಣಗೊಂಡ ಸಮುದಾಯ ಆರೋಗ್ಯ ಕೇಂದ್ರದ ಘಟಕವನ್ನು ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ವಾಮನ ಆಚಾರ್ಯ ರವಿವಾರ ಸಂಜೆ ಉದ್ಘಾಟಿಸಿದರು. ಎಲ್ಲರಿಗೂ ಆರೋಗ್ಯದ ಕಾಳಜಿಯೊಂದಿಗೆ ಕೆನರಾ ಶಿಕ್ಷಣ ಸಂಸ್ಥೆ ತನ್ನ ಆವರಣದಲ್ಲಿ ಒದಗಿಸುತ್ತಿರುವ ಆರೋಗ್ಯ ಸೇವೆ ಸಮುದಾಯ ಸೇವಾ ಚಿಂತನೆ ಅಭಿನಂದನಾರ್ಹ ಎಂದವರು ಹೇಳಿದರು.
ಪಂಚಾಯತ್ ಉಪಾಧ್ಯಕ್ಷೆ ಪ್ರಮೀಳಾ , ಸದಸ್ಯರಾದ ರಾಧಾಕೃಷ್ಣ ತಂತ್ರಿ, ಲೀಲಾವತಿ, ಲಕ್ಷ್ಮೀ, ಪಂಚಾಯತ್ ಅಭಿವೃಧ್ಧಿ ಅಧಿಕಾರಿ ನಯನಾ , ಡಾ. ಸಾರಿಕಾ ರೈ, ಬೆಂಜನಪದವು ಸರ್ಕಾರಿ ಆರೋಗ್ಯ ಕೇಂದ್ರದ ಡಾ. ಹೆನ್ಸಿಲ್ಲಾ ಪತ್ರಾವೋ ಸಹಿತ ಆಶಾ ಕಾರ್ಯಕರ್ತೆಯರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು.
ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಉಪಾಧ್ಯಕ್ಷ , ಕಾಲೇಜಿನ ಸಂಚಾಲಕ ಎಂ. ಪದ್ಮನಾಭ ಪೈ, ಕಾರ್ಯದರ್ಶಿ ಎಂ. ರಂಗನಾಥ ಭಟ್, ಕೋಶಾಧಿಕಾರಿ ಎಂ. ವಾಮನ ಕಾಮತ್, ಸಹ ಕೋಶಾಧಿಕಾರಿ ಬಸ್ತಿ ಪುರುಷೋತ್ತಮ ಶೆಣೈ , ಕಾಲೇಜು ಪ್ರಾಂಶುಪಾಲ ಡಾ. ಗಣೇಶ್ ವಿ.ಭಟ್ ಮತ್ತಿತರರು ಉಪಸ್ಥಿತರಿದ್ದರು.