ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರ ಮತ್ತು ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಮೇಲುಗೈ ಸಾಧಿಸಿ ಬಿಜೆಪಿಯ ಮಗ್ಗುಲು ಮುರಿದಿದೆ. ಅದೇ ರೀತಿ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ನಗರ್ ಹವೇಲಿ ಲೋಕಸಭಾ ಕ್ಷೇತ್ರ ಗೆದ್ದ ಶಿವಸೇನೆ ಸಹ ಬಿಜೆಪಿಗೆ ಒಂದೇಟು ಇಟ್ಟಿದೆ. ಉಳಿದಂತೆ ನಿರೀಕ್ಷಿತ ಫಲಿತಾಂಶ ಬಂದಿದೆ.
ಮಧ್ಯ ಪ್ರದೇಶದ ಖಾಂಡ್ವಾ ಲೋಕಸಭಾ ಕ್ಷೇತ್ರ ಬಿಜೆಪಿಗೆ ದಕ್ಕಿದೆ. ಉಳಿದ ವಿಧಾನ ಸಭಾ ಕ್ಷೇತ್ರಗಳ ಫಲಿತಾಂಶ ಮುಂದಿನಂತಿದೆ. ಅಸ್ಸಾಂ 5 ಬಿಜೆಪಿ, ಬಿಹಾರ 2 ಜೆಡಿಯು, ಹರಿಯಾಣ 1 ಐಎನ್‌ಎಲ್‌ಡಿ, ಪಡುವಣ ಬಂಗಾಳ 4 ಟಿಎಂಸಿ, ಮಧ್ಯ ಪ್ರದೇಶ 3 ಬಿಜೆಪಿ 2- ಕಾಂಗ್ರೆಸ್ 1, ಮಹಾರಾಷ್ಟ್ರ 1 ಕಾಂಗ್ರೆಸ್, ತೆಲಂಗಾಣ 1 ಬಿಜೆಪಿ, ಮೇಘಾಲಯ 3 ಎನ್‌ಪಿಪಿ 2- ಯುಡಿಪಿ 1, ರಾಜಸ್ತಾನ 2 ಕಾಂಗ್ರೆಸ್, ನಾಗಾಲ್ಯಾಂಡ್ 1 ಎನ್‌ಡಿಪಿಪಿ ಗೆಲುವು ಕಂಡಿವೆ.