ಅತ್ಯುತ್ತಮ ಕ್ರೀಡಾ ಸಾಧಕರಿಗೆ ನೀಡುವ ದೇಶದ ಅತ್ಯುನ್ನತ ಆಟೋಟ ಪುರಸ್ಕಾರವಾದ ಖೇಲ್ ರತ್ನ ಪ್ರಶಸ್ತಿಯನ್ನು ಈ ಬಾರಿ 12 ಜನರಿಗೆ ನೀಡುವ ಘೋಷಣೆ ಆಯಿತು. ಸುನೀಲ್ ಚೇಟ್ರಿ, ಮಿಥಾಲಿ ರಾಜ್, ನೀರಜ್ ಚೋಪ್ರಾ, ಅವನಿ ಲೇಖರಾ ಇದರಲ್ಲಿ ಸೇರಿದ್ದಾರೆ.
35 ಜನ ಸಾಧಕ ಕ್ರೀಡಾ ಪಟುಗಳಿಗೆ ಈ ಬಾರಿ ಅರ್ಜುನ ಪ್ರಶಸ್ತಿ ನೀಡಲು ತೀರ್ಮಾನ ಮಾಡಲಾಯಿತು. ಭವಾನಿ ದೇವಿ, ವಂದನಾ ಕಟಾರಿಯಾ, ಹರ್ವಿಂದರ್ ಸಿಂಗ್, ಶಿಖರ್ ಧವನ್ ಈ ಪಟ್ಟಿಯಲ್ಲಿ ಇದ್ದಾರೆ.