ಮಂಗಳೂರು, ಅ 03: ದಿವಂಗತ ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದರೊಂದಿಗೆ ಮತ್ತು ದೀಪಾವಳಿ ಶುಭಾಶಯ ಕೋರುತ್ತ ಸುದ್ದಿ ಗೋಷ್ಠಿ ಆರಂಭಿಸಿದ ಮಾಜೀ ಮುಖ್ಯ ರಮಾನಾಥ ರೈ ಅವರು ಭಾರತದ ಇಂದಿನ ಅತಿ ದೊಡ್ಡ ಸಮಸ್ಯೆ ಬೆಲೆಯೇರಿಕೆ.
ಬೆಲೆ ಇಳಿಸುವುದಾಗಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿಯವರ ಸರಕಾರವು ಬೆಲೆಯೇರಿಕೆಯನ್ನೇ ಉದ್ಯೋಗ ಮಾಡಿಕೊಂಡಿದೆ. ಕೇಂದ್ರ ಸಚಿವರಾದ ಖೂಬಾ ಮೊದಲಾದವರು ಬೆಲೆಯೇರಿಕೆ ಜನರಿಗೆ ಸಮಸ್ಯೆ ಆಗಿಲ್ಲ. ಅದು ಕಾಂಗ್ರೆಸ್‌ನವರ ಅಪಪ್ರಚಾರವಾಗಿದೆ ಎಂದು ರೈ ತಿಳಿಸಿದರು.
ರೈ ಯಾರಿಗೆ ಹುಟ್ಟಿದ್ದಾರೆ, ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಟೋಪಿ ಹಾಕಿ ಇವರು ಯಾರಿಗೆ ಹುಟ್ಟಿದ್ದಾರೆ ಎಂದು ಕೇಳುವಂತ ಕೀಳು ರಾಜಕೀಯವನ್ನು ಬಿಜೆಪಿ ಜನರು ನಡೆಸಿದ್ದಾರೆ. ಇವರು ಯಾರಿಗೆ ಹುಟ್ಟಿದ್ದಾರೆ ಎಂದು ನಾವು ಕೇಳುವುದಿಲ್ಲ. ಅಷ್ಟು ಕೀಳು ಮಟ್ಟದ ರಾಜಕೀಯ ನಮ್ಮದಲ್ಲ ಎಂದು ರಮಾನಾಥ ರೈ ತಿಳಿಸಿದರು.
ಅನೈತಿಕ ಪೋಲೀಸುಗಿರಿ, ಸಮಾಜ ಒಡೆಯುವ ಕೆಲಸ, ಭಾವನಾತ್ಮಕ ವಿಷಯಗಳನ್ನು ಹೇಳಿ ಸಮಾಜ ಕೆಡಿಸುವ ಬಿಜೆಪಿ ಪರ ಸಂಘಟನೆಗಳ ಮನೋಭಾವ ಸರಿ ಇಲ್ಲ. ಬೆಲೆಯೇರಿಕೆಗೆ ಕೊರೋನಾದಂಥ ಕಾರಣವನ್ನೂ ಬಿಜೆಪಿ ಜನ ಕೊಡುತ್ತಾರೆ. ನಮ್ಮ ನೆರೆಹೊರೆಯ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮೊದಲಾದ ಕಡೆ ಪೆಟ್ರೋಲಿಯಂ ಬೆಲೆ ಇಲ್ಲಿಗಿಂತ ತುಂಬ ಕಡಿಮೆ ಇದೆ. ಬಿಜೆಪಿಯವರದು ಕೈಲಾಗದವರ ಸರಕಾರ ಎಂದು ರೈ ಹೇಳಿದರು.
ಬಿಜೆಪಿಯು ನಿರುದ್ಯೋಗ ಸಮಸ್ಯೆ ಏರಿಸಿದೆ. ಶ್ರೀಮಂತರು ಹೆಚ್ಚಾಗುತ್ತಿರುವ ಭಾರತದಲ್ಲಿ ಬಡವರ ಸಂಖ್ಯೆ ಮೋದಿ ಸರಕಾರದ್ದು ಎಂದು ರೈ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಭಾಸ್ಕರ ಮೊಯ್ಲಿ, ಹರಿನಾಥ್, ಶಶಿಧರ ಹೆಗ್ಡೆ, ಶಾಲೆಟ್ ಪಿಂಟೊ, ಅಪ್ಪಿ, ಗಣೇಶ ಪೂಜಾರಿ, ನೀರಜ್ ಪಾಲ್, ನಜೀರ್ ಬಜಾಲ್, ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.
ಉಪ ಚುನಾವಣೆಯಲ್ಲಿ ಒಟ್ಟಾರೆ ಕಾಂಗ್ರೆಸ್‌ಗೆ ಲಾಭವಾಗಿದೆ. ಬಿಜೆಪಿಯ ವೈಫಲ್ಯ ಇದಕ್ಕೆ ಕಾರಣ ಎಂದೂ ರೈ ತಿಳಿಸಿದರು.