ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ 

ಮಕರ ಸಂಕ್ರಾಂತಿ ದಿನ ಸೂರ್ಯನ ನಿರಯನ ಮಕರ ರಾಶಿಯಲ್ಲಿ ಸಂಕ್ರಮಣ ವಾಗುತ್ತದೆ. ಪಂಚಾಂಗದ ನಿರಯನ ಪದ್ಧತಿಗೆ ಅನುಸಾರವಾಗಿ ಸೂರ್ಯನ ಉತ್ತರಾಯಣ ಪ್ರಾರಂಭವಾಗುತ್ತದೆ. ಕರ್ಕ ಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯ ವರೆಗಿನ ಕಾಲವನ್ನು ದಕ್ಷಿಣಾಯನ ಎಂದು ಕರೆಯುತ್ತಾರೆ. ಮಕರ ಸಂಕ್ರಾಂತಿಯ ದಿನ ಪಂಚಾಂಗದ ನಿರಯನ ಪದ್ಧತಿಗೆ ಅನುಸಾರ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ವಾತಾವರಣ ಅಧಿಕ ಚೈತನ್ಯಮಯವಾಗಿ ಇದ್ದು ಸಾಧನೆಯನ್ನು ಮಾಡುವವರಿಗೆ ಲಾಭದಾಯಕ ವಾಗಿದೆ. 

ಸಾಮಾನ್ಯವಾಗಿ ಹೊಸ ಪಾತ್ರೆ, ವಸ್ತ್ರ, ಅನ್ನ, ಎಳ್ಳು, ಬೆಲ್ಲ ಇತ್ಯಾದಿಗಳನ್ನು ದಾನ ಮಾಡುತ್ತಾರೆ. ಇದಕ್ಕೆ ಬಾಗಿನ ನೀಡುವುದು ಎನ್ನುತ್ತಾರೆ. ಇದರಿಂದ ಇಚ್ಚಿತ ಫಲ ಪ್ರಾಪ್ತಿಯಾಗುತ್ತದೆ ಎಂದು ನಂಬುತ್ತಾರೆ. 

ಕೆಲವರು ಎಳ್ಳು ನೀರಿನಿಂದ ಸ್ನಾನ ಮಾಡಿ, ಎಳ್ಳು ಬೆಲ್ಲವನ್ನು ಸೇವಿಸಿ, ಇತರರಿಗೂ ಕೊಟ್ಟು, ಶಿವ ಮಂದಿರದಲ್ಲಿ ಎಳ್ಳೆಣ್ಣೆಯ ದೀಪವನ್ನು ಹಚ್ಚಿ ಪಿತೃ ಶ್ರಾದ್ಧವನ್ನೂ ಮಾಡುತ್ತಾರೆ.

ಎಳ್ಳು ಬೆಲ್ಲವನ್ನು ಸೇವಿಸುವುದರಿಂದ ಅಂತ ಶುದ್ಧಿಯಾಗಿ ಸಾಧನೆಯ ಒಳ್ಳೆಯ ರೀತಿಯಿಂದ ಆಗಲು ಸಹಾಯ ಮಾಡುತ್ತದೆ. ಇದನ್ನು ಹಂಚುವುದರಿಂದ ಸಾತ್ವಿಕತೆಯ ಅಭಿವೃದ್ಧಿ ಸಾಧ್ಯ ಇದೆ ಎಂದು ಹೇಳಲಾಗುತ್ತಿದೆ.