ಬಸ್ ಎಂಬ ಜೀವನದಲ್ಲಿ ತಂದೆಯೇ ಡ್ರೈವರ್
ತಾಯಿಯೇ ಕಂಡಕ್ಟರ್
ಮೊದಲನೆಯ ಸೀಟಿನಲ್ಲಿ ಅಣ್ಣ
ಎರಡನೆಯ ಸೀಟಿನಲ್ಲಿ ಅಕ್ಕ
ಮೂರನೇ ಸೀಟಿನಲ್ಲಿ ನಾನು
ನಾಲ್ಕನೇ ಸೀಟಿನಲ್ಲಿ ನನ್ನ ಮುದ್ದಿನ ತಂಗಿ.
ಅಪ್ಪನಿಗೆ ಬಸ್ಸಿನಲ್ಲಿ ಪೆಟ್ರೋಲ್ ಮತ್ತು ಗಾಲಿಯಲ್ಲಿರುವ ವಾಯುವಿನ ಚಿಂತೆ ಏಕೆಂದರೆ ಇವೆರಡೂ ತುಂಬಿದ್ದರೆ ಆ ಬಸ್ಸು ತನ್ನ ಗುರಿಯ ಮುಟ್ಟಬಹುದು ಎಂಬ ಚಿಂತೆ .ತಂದೆಯ ಹೆಗಲಿನ ಮೇಲೆ ಜವಾಬ್ದಾರಿಗಳಿದ್ದು, ಕೈಯಲ್ಲಿ ಸ್ಟೇರಿಂಗ್ ಅನ್ನು ಹಿಡಿದು
ಕಾಲಿನಲ್ಲಿ ಬ್ರೇಕ್. ಅದರ ಮಧ್ಯ ಮಧ್ಯದಲ್ಲಿ ಹಾರ್ನ್ ಹಾಕುತ್ತಾ ಮುಂದಿನ ದಾರಿಯಲ್ಲಿ ತಗ್ಗು ದುಂಡಿಗಳನ್ನು ನೋಡುತ್ತಾ ನಿಧಾನವಾಗಿ ತನ್ನ ಜೀವನವೆಂಬ ಬಸ್ಸನ್ನು ಮುಂದೆ ಸಾಗಿಸುತ್ತಾ ನಡೆಯುವರು.
ಕಂಡಕ್ಟರ್ ರೂಪದಲ್ಲಿ ತಾಯಿ ಎಲ್ಲರನ್ನು ಎಚ್ಚರಿಸುತ್ತಾ ಹಿಂದೆ ಮುಂದೆ ನೋಡುತ್ತಾ ಸೀಟಿನಲ್ಲಿ ಚೆನ್ನಾಗಿ ಕುಳಿತಿದ್ದೀರ ಇಲ್ಲವಾ ಹೇಳುವಾಗ ಕುಳಿತುಕೊಳ್ಳುವಾಗ ಬೀಳುವಿರಿ
ಎಂದು ನಮ್ಮನ್ನು ಗಜರಿಸುತ್ತಾ ಟಿಕೆಟಿ ಇಲ್ಲದೆ ಪ್ರಯಾಣ ಮಾಡಬಾರದು ಎಂದು ನಮ್ಮನ್ನು ಹೇಳುತ್ತಾ. ನಮ್ಮ ಪ್ರಯಾಣವನ್ನು ಸುಖಮಯವಾಗಲಿ ಎಂದು ಹಾರೈಸುತ್ತಾ ನಮ್ಮ ಗುರಿ ತಲುಪುವವರಿಗೆ ನಮ್ಮನ್ನು ಕಾಯುತ್ತಾ ಆ ಕಂಡಕ್ಟರ್ ರೂಪದಲ್ಲಿರುವ ನಮ್ಮ ತಾಯಿಯೇ.
ಟಿಕೆಟ್ ಎಂದರೆ ನಮ್ಮ ಜೀವನದ ಗುರಿ, ನಮ್ಮ ನಡೆ, ನುಡಿ ಇವುಗಳನ್ನು ನಮ್ಮ ಜೊತೆಯಾಗಿ ಇಟ್ಟುಕೊಂಡು ಜೀವನದ ಪಯಣದಲ್ಲಿ ಪ್ರಯಾಣ ಮಾಡಬೇಕೆಂಬರ್ಥ. ಸ್ಟೇರಿಂಗ್ ಅಂದರೆ ತಂದೆಯ ಕೈಯಡಿಯಲ್ಲಿ ಮನೆಯ ನಿಯಮಗಳು ನಡೆಯಬೇಕು. ಮತ್ತು ಮಕ್ಕಳು ತಪ್ಪು ಮಾಡಿದಾಗ ಪದೇ ಪದೇ ಅವರಿಗೆ ಬ್ರೇಕ್ ಹಾಕುತ್ತಾ ಜೀವನದ ಅರ್ಥವನ್ನು ಹಾರ್ನ್ ದಿಂದ ನಮ್ಮನ್ನು ಎಚ್ಚರಿಸುತ್ತಾ ಜೀವನದ ಅವಘಡಗಳನ್ನು ಧೈರ್ಯದಿಂದ ಎದುರಿಸುತ್ತಾ.4 ಗಾಲಿಗಳ ಸರಿ ಸಮಾನವಾಗಿ ತಂದೆ ತಾಯಿಯ ಮಾರ್ಗದರ್ಶನದಲ್ಲಿ ನಮ್ಮ ಜೀವನ ಸುಖಮ ಎಂದು. ಬಸ್ ಎಂಬ ಜೀವನದಲ್ಲಿ ಸಾಗಬೇಕು. ಮುಂದಿನ ಬಾಗಿಲದಿಂದ ಹತ್ತಿ , ಹಿಂದಿನ ಬಾಗಿಲದಿಂದ ಇಳಿದು ಹೋಗುವುದೇ ಜೀವನ ಅಂದರೆ ಮುಂದಿನ ಬಾಗಿಲ ಜನ್ಮ ಹಿಂದಿನ ಬಾಗಿಲ ಮುಕ್ತಿಯ ಮಾರ್ಗ. ಅದರ ಮಧ್ಯದಲ್ಲಿ ಸಾಕಷ್ಟು ಜನ ಜೊತೆಗಾರರಾಗಿ ಕಿಡಕಿಗಳಿಂದ ನೂರಾರು ಜನರ ಒಳ್ಳೆಯ ಮತ್ತು ಕೆಟ್ಟಮಾತುಗಳನ್ನು ಆಲಿಸಿದರು. ನಮ್ಮ ಪ್ರಯಾಣದ ದಾರಿ ಮುಟ್ಟುವವರೆಗೆ ಎಲ್ಲವನ್ನು ಸಹಿಸಿ ಹಿಂದಿನ ಬಾಗಿಲದಿಂದ ಇಳಿದು ಹೋಗುವುದೇ ಜೀವನ ನಾವು ತೆಗೆದುಕೊಂಡಿರುವ ಟಿಕೆಟಿನ ಮೌಲ್ಯವನ್ನು ತಿಳಿದು ಆ ಬಸ್ಸಿನಿಂದ ದೂರವಾಗಿ ಇಳಿದು ಹೋಗುವುದೇ ಜೀವನ. ನಮ್ಮ ಜೀವನದ ಕರ್ತವ್ಯವನ್ನು ಮುಗಿಸಿ ಬಣ್ಣ ಬಣ್ಣದ ಬದುಕನ್ನು ಬದುಕಿ ಹೋಗುವುದು ಜೀವನ.ಜೀವನದ ಅರ್ಥವನ್ನು ತಿಳಿದುಕೊಳ್ಳಲು ಸಾಕಷ್ಟು ಉದಾಹರಣೆಗಳು ಸಿಗುತ್ತವೆ.ಆದರೆ ತಿಳಿದು ಕೊಳ್ಳುವ ಸ್ಥೇರ್ಯ ಇಲ್ಲದಾಗಿದೆ. ನಾವು ಪ್ರಯಾಣಿಸುವ ಜೀವನ ನೇರ ದಿಟ್ಟ,ಹಾಗೂ ಸುಗಮವಾಗಿರಬೇಕು, ನಮ್ಮ ಗುರಿ ತಲುಪುವವರಿಗೆ ತಗ್ಗು ದುಂಡಿಗಳನ್ನು ಎದುರಿಸುತ್ತಾ.ಏರಿಳಿತವನ್ನು ಸಹಿಸುತ್ತಾ.ತಂದೆ, ತಾಯಿಯ ಮಾರ್ಗದಡಿಯಲ್ಲಿ ಸಾಗಿಸುವ ಜೀವನವೇ ಸಾರ್ಥಕದ ಜೀವನ.
ಅನ್ನಪೂರ್ಣ.ಪ್ರೇ. ಭಾಂಡಗೆ, ಹುಬ್ಬಳ್ಳಿ