ಕೊರ್ಡೇಲಿಯಾ ಕ್ರೂಸ್‌ನಲ್ಲಿ ನಡೆದ ಡ್ರಗ್ಸ್ ಪಾರ್ಟಿಗೆ ಕೇಂದ್ರದ ಬಂದರು ಮತ್ತು ಹಡಗು ಹಾಗೂ ಜಲಸಾರಿಗೆ ಸಚಿವಾಲಯದ ಅನುಮತಿ ಇತ್ತು ಹೊರತು ಮಹಾರಾಷ್ಟ್ರ ಸರಕಾರದ ಪರವಾನಗಿ ಅಲ್ಲ ಎಂದು ಮಹಾರಾಷ್ಟ್ರದ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಾಲಿಕ್ ಹೇಳಿದ್ದಾರೆ.

ಆ ಡ್ರಗ್ಸ್ ಪಾರ್ಟಿಯಲ್ಲಿ ಅಂತರರಾಷ್ಟ್ರೀಯ ಡ್ರಗ್ ಪೆಡ್ಲರ್ ಒಬ್ಬರು ಇದ್ದರು. ಅವರನ್ನು ಬಂಧಿಸದೆ, ಸಂಬಂಧ ಇಲ್ಲದವರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿ ರಾಜಕೀಯ ಮಾಡಿದ್ದಾರೆ ಎಂದು ಅವರು ಹೇಳಿದರು.