ಕೇರಳದಲ್ಲಿ ಕೊರೋನಾ ಕಾಣಿಸಿಕೊಂಡ ಈ ಒಂದೂವರೆ ವರುಷಗಳ ಅವಧಿಯಲ್ಲಿ ಕೊರೋನಾದಿಂದ 41 ಜನ ಬಸುರಿಯರು ಅಸು ನೀಗಿದ್ದಾರೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ವಿಧಾನ ಸಭೆಯಲ್ಲಿ ‌ಉತ್ತರಿಸುತ್ತ ಹೇಳಿದರು.

ಕಾಂಗ್ರೆಸ್‌ನ ಶಾಸಕ ಟಿ. ಜೆ. ವಿನೋದ್ ಅವರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವೆಯು ಕೊರೋನಾ ದೃಢ ಪಟ್ಟವರಲ್ಲಿ 149 ಜನರು ಈ ಒಂದೂವರೆ ವರುಷದಲ್ಲಿ ತಾಕೊಲೆ ಮಾಡಿಕೊಂಡಿರುವುದಾಗಿಯೂ ಹೇಳಿದರು.