ಮಂಗಳೂರು: ನಗರದ ಎ.ಬಿ.ಶೆಟ್ಟಿ ವೃತ್ತದಿಂದ ಓಲ್ಟ್ ಕೇಂಟ್ ರಸ್ತೆಗೆ ಏಕಮುಖ ವಾಹನ ಸಂಚಾರಕ್ಕೆ ವಿರೋಧವಾಗಿ ಮಂಗಳೂರು ದಕ್ಷಿಣ ವಿಧಾನ ಸಭಾಕ್ಷೇತ್ರದ ಜೆ.ಡಿ.ಎಸ್ ವತಿಯಿಂದ ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿತ್ತು..
ಪ್ರತಿಭಟನೆಯನ್ನ ಉದ್ದೇಶಿಸಿ ಮಾತನಾಡಿದ ಪಕ್ಷದ ನಾಯಕರಾದ ಸುಶೀಲ್ ನೂರನ್ನ ಈ ಒಂದು ದೀಡಿರ ರಸ್ತೆ ಮಾರ್ಪಡಿನಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿದ್ದು ಈ ನಿರ್ಧಾರವನ್ನು ಕೂಡಲೇ ಕೈ ಬಿಡಬೇಕೆಂದು...ಸಂಬಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದರು.ಅಲ್ಲದೆ ಸ್ಮಾರ್ಟಸಿಟಿ ಯೋಜನೆಗೆ ಕೇಂದ್ರ ಹಾಗು ರಾಜ್ಯ ಸರಕಾರದಿಂದ ಸುಮಾರು ಐನೂರು ಕೋಟಿ ಹಣ ಬಿಡುಗಡೆಯಾಗಿದ್ದು ಯಾವುದೇ ಕಾಮಗಾರಿಯನ್ನು ಪೂರ್ಣಗೂಳಿಸದೇ ನಗರದ ಎಲ್ಲಾ ರಸ್ತೆಗಳನ್ನು ಅಗೆದು ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು ಜನಸಮಾನ್ಯರಿಗೆ ಸಂಚಾರಕ್ಕೆ ತ್ರಿಶಂಖು ಪರಿಸ್ಥಿತಿ ಉಂಟು ಮಾಡಿದ್ದಾರೆ.
ಸ್ಮಾರ್ಟ ಸಿಟಿಯ ಬಗ್ಗೆ...ಸರಕಾರಿ ಕಚೇರಿಗಳಲ್ಲಿ ವಿಚಾರಿಸಲು ಹೋದರೆ ಅಧಿಕಾರಿಗಳು ಯಾವುದೇ ವಿವರಣೆಯನ್ನಡಲು ನಿರಾಕರಿಸುತ್ತಾರೆ...ಅದರಿಂದ ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಯವರು ಹಾಗು ಮಾನ್ಯ ಪೋಲಿಸ ಆಯುಕ್ತರು.ಗಮನಹರಿಸಿ ಜನಸಮಾನ್ಯರಿಗೆ ಉಂಟಾದ ಸಮಸ್ಯೆಯನ್ನ ಪರಿಹರಿಸುವರೇ ಒತ್ತಾಯಿಸಿದರು.
ಜೆ .ಡಿ ಎಸ್ ಪಕ್ಷದ ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ಸುಮತಿ ಹೆಗ್ಹಡೆಯವರು ಬೆಲೆಗಳೆಲ್ಲ ಗಗನಕ್ಕೆ ಏರಿದ್ದು ಗ್ಯಾಸ್,ಪೆಟ್ರೋಲ್, ಡೀಸಿಲ್ ಬೆಲೆ ಅತೀ ಉತ್ತುಂಗಕ್ಕೆ ಬೆಲೆ ಎರಿದ ಸಂದರ್ಭದಲ್ಲಿ ಈ ರೀತಿಯಲ್ಲಿ ವಾಹನ ಸಂಚಾರಕ್ಕೆ ರಸ್ತೆ ಮಾರ್ಪಡು ಮಾಡಿದ್ದು ಯಾವುದೇ ಕಾರಣಕ್ಕೆ ಸರಿಯಲ್ಲ ಎಂದು ಹೇಳಿದರು.
ರಾಜ್ಯ ಮೀನುಗಾರಿಕ ಘಟಕದ ಅಧ್ಯಕ್ಷರಾದ ರತ್ನಾಕರ ಸುವರ್ಣ ಸ್ವಾಗತಿಸಿ , ಯುವ ನಾಯಕ ಪೈಜಲ್ ರಹಿಮಾನ್ ವಂದಿಸಿದರು. ಮುನೀರ್ ಮುಕ್ಕಚೇರಿ ಕಾರ್ಯಕ್ರಮ ನಿರ್ವಹಿಸಿದ್ದು.ಈ ಸಂದರ್ಭದಲ್ಲಿ ಪಕ್ಷದ ಮುಂಖಡರಾದ ಎನ್.ಪಿ.ಪುಷ್ಪರಾಜನ್, ಸುಮಿತ್ ಸುರ್ವಣ,ಸವಾಝ್,ರಿಷ್ ಬ್ಯಾರಿ , ಶಿವಾನಂದ , ಬಿಲಾಲ್, ಮುನ್ನಾ , ನಝೀರ್ , ಹರ್ಷಿತ ,ಭವಾನಿ ಜೋಗಿ ,ಹಾಪ್ಲಾಲ್ ,ಹಲ್ತಾಫ ತುಂಬೆ..ಲತೀಫ್ ಬೆಂಗ್ರೆ, ಶಫೀಕ್ ಕಲ್ಲಾಪು....ನಝೀರ್ ಸಮಾನಿಗ್, ವೀಣಾ.ಶೆಟ್ಟಿ, ಶಾರದ.ಶೆಟ್ಟಿ , ಕಲೀಲ್ ಹಾಗು ಇನ್ನಿತರು ಉಪಸ್ಥಿತರು ಇದ್ದರು