ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಮಂತ್ರಿ ಮಾಲಿಕ್ ಅವರು ಮತ್ತೆ ಸರಣಿ ಟ್ವೀಟ್ ಮಾಡಿದ್ದು, ಸಮೀರ್ ವಾಂಖೆಡೆ ನಕಲಿಗಳ ಸರದಾರ ಎಂದು ದಾಖಲೆ ಒದಗಿಸಿದ್ದಾರೆ.
ವಾಂಖೆಡೆ ತಂದೆಯು ದಲಿತರಿದ್ದು ಮುಸ್ಲಿಂಗೆ ಮತಾಂತರಗೊಂಡು ಮುಸ್ಲಿಂ ಮಹಿಳೆಯನ್ನು ಮದುವೆಯಾದವರು. ಮತಾಂತರ ಹೊಂದಿದ ಮುಸ್ಲಿಂಗೆ ಮೀಸಲಾತಿ ಇಲ್ಲ. ಆದರೆ ವಾಂಖೆಡೆ ನಕಲಿ ಜಾತಿ ಸರ್ಟಿಫಿಕೇಟ್ ಮೂಲಕ ಮೀಸಲಾತಿ ಕೆಲಸ ಪಡೆದಿದ್ದಾರೆ.
ಅವರ ಜನನ ಪ್ರಮಾಣ ಪತ್ರ ಟ್ವೀಟ್ ಮಾಡಿ, ಅದರಲ್ಲಿ ಮುಸ್ಲಿಂ ಎಂದು ಇರುವುದನ್ನು ತೋರಿಸಿದ್ದಾರೆ.
ವಾಂಖೆಡೆ ಮೊದಲ ಮದುವೆ ಶಬಾನಾ ಖುರೇಶಿ ಎಂಬ ಮುಸ್ಲಿಂ ಜೊತೆಗೆ ಆಗಿರುವುದರ ದಾಖಲೆಯನ್ನೂ ಟ್ವೀಟ್ ಮಾಡಲಾಗಿದೆ.