ತನ್ನ ಸರಕಾರ ಒಂದು ವರುಷ ಪೂರೈಸಿದ ಸಂದರ್ಭದಲ್ಲಿ ವಿಧಾನ ಸೌಧದ ಮೂರನೆಯ ಮಹಡಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರೈತ ವಿದ್ಯಾನಿಧಿ ಯೋಜನೆಯನ್ನು ಮೀನುಗಾರರು, ನೇಕಾರರು, ಟ್ಯಾಕ್ಸಿ ಚಾಲಕರ ಮಕ್ಕಳಿಗೂ ವಿಸ್ತರಿಸುವುದಾಗಿ ಹೇಳಿದರು.

ಇದರಿಂದ 50,000 ನೇಕಾರರ ಮಕ್ಕಳು, 12,000ದಷ್ಟು ಟ್ಯಾಕ್ಸಿ ಚಾಲಕರ ಮಕ್ಕಳು ಲಾಭ ಪಡೆಯುವರು ಎಂದು ಬೊಮ್ಮಾಯಿಯವರು ಹೇಳಿದರು.

ಎಸ್‌ಸಿ/ಎಸ್‌ಟಿ ಜನರ ಮನೆಗಳಿಗೆ 75 ಯೂನಿಟ್ ಉಚಿತ ವಿದ್ಯುತ್ ನೀಡುವುದು ಮೊದಲಾದ ಯೋಜನೆಗಳನ್ನು ಸಹ ಮುಖ್ಯಮಂತ್ರಿಗಳು ಘೋಷಣೆ ಮಾಡಿದರು.