ಸುರತ್ಕಲ್ : ಮಂಗಳಪೇಟೆಯ ನಿವಾಸಿ 23ರ ಮೊಹಮ್ಮದ್ ಫಾಜಿಲ್ ಎಂಬ ಯುವಕನನ್ನು ಗುರುವಾರ ರಾತ್ರಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗುಂಪು ತಲವಾರುಗಳಿಂದ ಕಂಡ ಕಂಡಲ್ಲಿ ಕೊಚ್ಚಿ ಕೊಲೆ ಮಾಡಿದೆ.
ಎಚ್ಪಿಸಿಎಲ್ನಲ್ಲಿ ಗ್ಯಾಸ್ ಸಿಲಿಂಡರ್ ಲೋಡ್ ಮಾಡುವ ಕೆಲಸ ಮಾಡುತ್ತಿದ್ದ ಫಾಜಿಲ್ ಮುಡ ಮಾರುಕಟ್ಟೆಯ ಸಂತೋಷ್ ಎಂಬವರಿಗೆ ಸೇರಿದ ಬೀಜ್ನೆಸ್ ಜವಳಿ ಅಂಗಡಿ ಎದುರು ನಿಂತಿದ್ದರು. ಕಾರಿನಲ್ಲಿ ಬಂದಿಳಿದ ಕೊಲೆಗಾರರು ಓಡಿದ ಫಾಜಿಲ್ರನ್ನು ಅಟ್ಟಾಡಿಸಿ ಕೊಚ್ಚಿದ್ದಾರೆ. ಅಲ್ಲೇ ಆಸ್ಪತ್ರೆಗೆ ಒಯ್ಯಲಾಯಿತಾದರೂ ಜೀವ ಬದುಕಲಿಲ್ಲ.
ಕಮಿಶನರ್ ಶಶಿಕುಮಾರ್ ಸಹಿತ ಹಿರಿಯ ಪೋಲೀಸು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಸಂಬಂಧ ಮಂಗಳೂರು ಹೊರವಲಯದಲ್ಲಿ ನಿಷೇಧಾಜ್ಞೆ ಘೋಷಿಸಲಾಗಿದೆ.