ರಾಜಕೀಯ ದುರುದ್ದೇಶಕ್ಕೆ ಅಮಾಯಕರ ಕೊಲೆ ಆಗಬಾರದು, ನಿಜವಾದ ಕೊಲೆಗಾರರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ನಮ್ಮ ಜಿಲ್ಲೆಯ ಮತ್ತು ರಾಜ್ಯದ ನಾಯಕರಲ್ಲಿ ನನ್ನ ಮನವಿ  ದಯವಿಟ್ಟು ಶಾಂತಿ ಕಾಪಾಡಲು, ಸೌಹಾರ್ದ ಕಾಯಲು ಹೇಳಿಕೆ ನೀಡಿ ಕೋಣೆಯಲ್ಲಿ ಕುಳಿತು ನೀವು ‌ಪ್ರಚೋದಕ ಹೇಳಿದರೆ ಮುಗ್ಧರು ಬಲಿಯಾಗುತ್ತಾರೆ ಎಂದು ಖಾದರ್ ಹೇಳಿದರು.

ಮುಖ್ಯಮಂತ್ರಿ ಆದವರು ರಾಜ್ಯದ ಸರ್ವರ ಹಿತ ಕಾಪಾಡಬೇಕು  ಅದು ಸಂವಿಧಾನದ ಆಶಯ, ಆದರೆ ಈ ಮುಖ್ಯಮಂತ್ರಿ ಕೆಲವರ ಮನೆಗೆ ಭೇಟಿ ನೀಡುವುದು, ಕೆಲವರಿಗೆ ಪರಿಹಾರ ನೀಡುವುದು ನಾಚಿಕಗೇಡು ಪ್ರಜಾಪ್ರಭುತ್ವ ನೀತಿಯೇ ಇದು. ಪ್ರವೀಣ್ ತಾಯಿ ಮನೆಯವರಂತೆ ಫಾಜಿಲ್, ಮಸೂದ್ ಮನೆ ತಾಯಿಯ ದುಕ್ಕವೂ ಒಂದೇ, ಮುಖ್ಯಮಂತ್ರಿಯೇ ಪಕ್ಷಪಾತ ಮಾಡಿದರೆ ಅಧಿಕಾರಿಗಳು ಪಕ್ಷಪಾತ ಮಾಡುವುದಿಲ್ಲವೆ? ಪರಿಹಾರ ನೀಡುವುದು ಜನ ನೀಡುವ ತೆರಿಗೆ ಹಣ ಮುಖ್ಯಮಂತ್ರಿ ಒಬ್ಬರಿಗೆ ಮಾತ್ರ ಪರಿಹಾರ ಎಂದರೆ ಅವರ ಕಿಸೆಯ ಹಣವೇ ಎಂದು ಖಾದರ್ ಪ್ರಶ್ನಿಸಿದರು.

ಪರಿಹಾರ ನೀಡುವಲ್ಲಿ ಮುಖ್ಯಮಂತ್ರಿ ಘನತೆ ಮೀರಿ ಕಪ್ಪು ಚುಕ್ಕೆ ಹಚ್ಚಿದ್ದಾರೆ ಮುಖ್ಯಮಂತ್ರಿ ಬಂದರೆ ಸಮಸ್ಯೆ ಪರಿಹಾರ ಆಗಬೇಕು. ಆದರೆ ಅವರು ವಿಮಾನ ಹತ್ತಿ ಹೋಗುವುದರೊಳಗೆ ಇನ್ನೊಂದು ಕೊಲೆ ಆಗಿದೆ ಮೊದಲ ಕೊಲೆ ಆದಾಗ ಎಚ್ಚರಿಕೆ ವಹಿಸಿದ್ದರೆ ಸರಣಿ ಕೊಲೆ ಆಗುತ್ತಿತ್ತೆ? ಇದು ಸರಕಾರದ ಸಂಘ ಪಕ್ಷಪಾತಿ ಧೋರಣೆಯೆ ಎಂದು ಖಾದರ್ ಪ್ರಶ್ನಿಸಿದರು.

ಶಾಂತಿ ಇದ್ದರೆ ಮಾತ್ರ ಅಭಿವೃದ್ಧಿ, ನಮಗೆ ನೆಮ್ಮದಿ ಇಲ್ಲದಿದ್ದರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂದು ಅವರು ಹೇಳಿದರು, ಉತ್ತರ ಪ್ರದೇಶದ ಮಾದರಿ ಎಂದರೆ ಬೊಮ್ಮಾಯಿಯವರು ವಿಫಲರೆ? ಹಿಂದೆ ಹೇಳಿದ ಗುಜರಾತ್ ಮಾದರಿ ಎಲ್ಲಿಗೆ ಹೋಯಿತು? ಅದನ್ನು ಬಿಟ್ಟು ಬಸವಣ್ಣ, ನಾರಾಯಣ ಗುರುಗಳ ಮಾದರಿ ಅನುಸರಿಸಿ  ಎಂದು ಪ್ರಶ್ನೆಯೊಂದಕ್ಕೆ ಖಾದರ್ ಉತ್ತರಿಸಿದರು.