ಕೇರಳದಲ್ಲಿ ಲವ್ ಜಿಹಾದ್ ಮೂಲಕ ಕ್ರೈಸ್ತ ತರುಣಿಯರನ್ನು ಮತಾಂತರಗೊಳಿಸಿ ಉಗ್ರ ಕೃತ್ಯ ಮತ್ತು ಮಾದಕ ವಸ್ತುಗಳ ಪೆಡ್ಲಿಂಗ್‌ನಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಶಪ್ ಆಪಾದಿಸಿದರು.
ಕುರುವಿಳಂಗಾಟ್‌ನ ವಾರ್ಷಿಕ ಉತ್ಸವದಲ್ಲಿ ಪಾಲ್ಗೊಳ್ಳಲು ಬಂದ ಪಾಲಾ ಬಿಶಪ್ ಮಾರ್ ಜೋಸೆಫ್ ಕಲ್ಲರಂಗಾಟ್ ಅವರು ನಮ್ಮ ಹುಡುಗಿಯರು ಲವ್ ಜಿಹಾದ್ ಆಗುವುದರ ಬಗೆಗೆ ಎಚ್ಚರಿಸಿದರು. ಪ್ರೀತಿ ತಪ್ಪಲ್ಲ. ಆದರೆ ಪ್ರೀತಿಯ ಹಾದಿಯಲ್ಲಿ ಮಾದಕ ವ್ಯಸನಕ್ಕೆ, ಮಾದಕ ದ್ರವ್ಯ ಕಳ್ಳ ಸಾಗಣಿಕೆ, ಉಗ್ರ ಜಾಲ ಇವಕ್ಕೆಲ್ಲ ತರುಣಿಯರು ಸಿಕ್ಕಿ ಬೀಳಬಾರದು ಎಂದು ಎಚ್ಚರಿಕೆ ನೀಡಿದರು.