ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಫಾರ್ಮಸಿ ಕಾಲೇಜು ಹಾಗೂ ಹೋಮಿಯೋಪಥಿ ಔಷಧೀಯ ವಿಭಾಗದ ವತಿಯಿಂದ ಡಿಸೆಂಬರ್ 17 ರ ಬುಧವಾರದಂದು ಸಂಜೆ 5:30 ರಿಂದ ಕ್ರಿಸ್ಮಸ್ ಸಂಭ್ರಮಾಚರಣೆ ಕಾರ್ಯಕ್ರಮವು ಜರುಗಲಿದ್ದು, ಈ ವೇಳೆ ಹೋಮಿಯೋಪಥಿ ವೈದ್ಯಕೀಯ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಸಹಕರಿಸಿದ ಪ್ರಮುಖರನ್ನು ಗುರುತಿಸುವ ಕಾರ್ಯವು ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ದಿವ್ಯಾ ಸತೀಶ್ ಶೆಟ್ಟಿಯವರು ಆಗಮಿಸಲಿದ್ದು, ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾದ ವಂ. ಫಾ. ಫೌಸ್ಟಿನ್ ಲೂಕಾಸ್ ಲೋಬೋರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ ಫಾದರ್ ಮುಲ್ಲರ್ ದೇರಳಕಟ್ಟೆ ಕ್ಯಾಂಪಸ್ ನ ಪ್ರಾಧ್ಯಾಪಕರಿಂದ, ವಿದ್ಯಾರ್ಥಿಗಳಿಂದ ಹಾಗೂ ಸಿಬ್ಬಂದಿಗಳಿಂದ ಸಾಂಸ್ಕ್ರತಿಕ ಸ್ಪರ್ಧೆಗಳು ನಡೆಯಲಿದ್ದು, ಸಾರ್ವಜನಿಕರು ಕೂಡ ಈ ಕಾರ್ಯಕ್ರಮವನ್ನು ವೀಕ್ಷಿಸಲು ಆಗಮಿಸಬಹುದು ಎಂದು FMHMC&H ಆಡಳಿತಾಧಿಕಾರಿಗಳಾದ ವಂ.ಫಾ. ಡೊನಾಲ್ಡ್ ನಿಲೇಶ್ ಕ್ರಾಸ್ತಾ, FMHPD ಆಡಳಿತಾಧಿಕಾರಿಗಳಾದ ವಂ.ಫಾ. ನೆಲ್ಸನ್ ಧೀರಜ್ ಪಾಯಸ್ ಹಾಗೂ FMHMC&H ಸಹಾಯಕ ಆಡಳಿತಾಧಿಕಾರಿಗಳಾದ ವಂ.ಫಾ. ಅಶ್ವಿನ್ ಲಾರೆನ್ಸ್ ಕ್ರಾಸ್ತಾರವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.