ಗುರುವಾರ 6.5 ಲಕ್ಷದಷ್ಟು ಜನ ಹೊಸದಾಗಿ ಲೋಕದಲ್ಲಿ ಸೋಂಕು ಭಾಜನರಾದರೆ, 3.1 ಸಾವಿರದಷ್ಟು ಜನರು ಸಾಂಕ್ರಾಮಿಕಕ್ಕೆ ಬಲಿಯಾದರು. ಎಲ್ಲವೂ ಸೇರಿ ಒಟ್ಟು ಸೋಂಕಿತರ ಸಂಖ್ಯೆಯು ಈಗ 51,58,77,151 ದಾಟಿತು. ಹಾಗೆಯೇ ಕೊರೋನಾ ಮರಣ ಕಂಡವರ ಸಂಖ್ಯೆಯು 62,72,154 ಮುಟ್ಟಿತು.
ಗುರುವಾರ ದಿನ 3,275 ನಮ್ಮ ಜನ ಕೊರೋನಾ ಸೋಂಕಿಗೀಡಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆಯು ಈಗ 4,30,94,548 ತಲುಪಿದೆ. ನಿನ್ನೆ ದಿನ ನಮ್ಮ ಜನ 55 ಮಂದಿ ಕೊರೋನಾ ಸಾವು ಹೊಂದಿದ್ದಾರೆ. ಅಲ್ಲಿಗೆ ಕೊರೋನಾವು ಬಲಿ ಪಡೆದವರ ಒಟ್ಟು ಸಂಖ್ಯೆಯು 5,23,975 ಆಯಿತು.
ಗುರುವಾರ ಹೊಸ ಸಾವು ಸುದ್ದಿ ಇಲ್ಲ. ನಿನ್ನೆ ಕರ್ನಾಟಕದಲ್ಲಿ 191 ಮಂದಿ ಹೊಸದಾಗಿ ನಾವೆಲ್ ಕೋವಿಡ್ 19 ಪಾಸಿಟಿವ್ ಎನಿಸಿದರು. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆಯು 39,48,283 ತಲುಪಿದೆ. ನಿನ್ನೆ ದಿನ ರಾಜ್ಯದಲ್ಲಿ ಕೋವಿಡ್ ಸಾವು ಸಂಭವಿಸಿಲ್ಲ. ರಾಜ್ಯದಲ್ಲಿ ಕೋವಿಡ್‌ಗೆ ಬಲಿಯಾದವರ ಒಟ್ಟು ಸಂಖ್ಯೆ ಈಗ 40,060ರಲ್ಲಿದೆ.
ಗುರುವಾರ ದ. ಕ.ದಲ್ಲಿ ಪಾಸಿಟಿವ್ ಎರಡು ವರದಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಬಂದವರ ಸಂಖ್ಯೆ 1,35,516ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ ಸಾವು ಆಗಿಲ್ಲ. ಒಟ್ಟು ಸಾವು ಸಂಖ್ಯೆ 1,850ರಲ್ಲಿ ಇದೆ.
ಉಡುಪಿಯಲ್ಲಿ ಗುರುವಾರ ಕೋವಿಡ್ ಸೋಂಕು ಪತ್ತೆಯಾಗಿಲ್ಲ. ಒಟ್ಟು ಸೋಂಕಿತರ ಸಂಖ್ಯೆಯು 95,611ರಲ್ಲಿ ಇದೆ. ನಿನ್ನೆ ಯಾವ ಸಾವು ಸಹ ಆಗಿಲ್ಲ. ಒಟ್ಟು ಸಾವು ಸಂಖ್ಯೆ 546ರಲ್ಲೇ ಇದೆ.