ಆದಿತ್ಯವಾರ ಸಹ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ಜನ ನೋವೆಲ್ ಕೋವಿಡ್19 ಬೇನೆಗೆ ಬಲಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಒಟ್ಟು ಕೊರೋನಾಕ್ಕೆ ಬಲಿಯಾದವರ ಸಂಖ್ಯೆಯು 790ಕ್ಕೆ ಮುಟ್ಟಿತು.

ನಿನ್ನೆ ‌ಪತ್ತೆಯಾದ ಹೊಸ ಕೊರೋನಾ ಸೋಂಕಿತರ ಸಂಖ್ಯೆ 1,175 ಆಗಿದ್ದು, ಒಟ್ಟಾರೆ ಕೊರೋನಾ ಹದ ಮಾಡಿದವರ ಸಂಖ್ಯೆಯು 57,551 ಆಯಿತು.

ಲೋಕ ಕೊರೋನಾ ಬಾಧಿತರ ಸಂಖ್ಯೆಯು 16 ಕೋಟಿ ಸಮೀಪಿಸಿದರೆ, ಅಮೆರಿಕದ ಸಾವಿನ ಸಂಖ್ಯೆ 6 ಲಕ್ಷ ಸಮೀಪಿಸಿದೆ. ಭಾರತದ ಸಾವು ಸಂಖ್ಯೆಯು ಎರಡೂವರೆ ಲಕ್ಷ ದಾಟಿ ‌ನಡೆಯಿತು. ಜಗತ್ತಿನ ಕೊರೋನಾ ಮೀಟರ್ ಬಾಧಿತರ ಒಟ್ಟು ಸಂಖ್ಯೆಯನ್ನು ನಿನ್ನೆ 15,95,95,279ರ ಮೇಲೆ ತೋರಿಸಿತು.ಜಾಗತಿಕವಾಗಿ ಕೊರೋನಾಕ್ಕೆ ಬಲಿಯಾದವರ ಒಟ್ಟು ಸಂಖ್ಯೆಯು ನಿನ್ನೆ 33,17,358 ದಾಟಿತು. ಒಟ್ಟು ಸೋಂಕಿತರ ಸಂಖ್ಯೆಯಲ್ಲಿ ಎರಡನೇ, ಎರಡನೇ ‌ಅಲೆಯಲ್ಲಿ‌ ಮೊದಲನೇ ಸ್ಥಾನದಲ್ಲಿರುವ ಭಾರತವು ಒಟ್ಟು ಸಾವಿನ ಸಂಖ್ಯೆಯಲ್ಲಿ ಮೂರನೆಯ ಸ್ಥಾನದಲ್ಲಿ ಇದೆ.ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 5,96,179, ಬ್ರೆಜಿಲ್ 4,23,436, ಭಾರತ 2,50,025 ಎಂದು ಜಗತ್ತಿನ ಮೊದಲ ಮೂರು ಸಾವು ಸ್ಥಾನಿಗಳು!