ಮೇ 9ರಂದು ಪ್ರ.ವಾ.ಯಲ್ಲಿ ಪ್ರಕಟವಾದ ಕರ್ನಾಟಕ ಜನಶಕ್ತಿ ಬೆಂಗಳೂರು ಜಾಹೀರಾತು ಪ್ರಧಾನಿ ಮೋದಿ ಮತ್ತು ಗೃಹ ಮಂತ್ರಿ ಶಾ ಅವರನ್ನು ಅವಮಾನಿಸುವಂತೆ ಇದ್ದು, ಅದನ್ನು ಖಂಡಿಸುವುದಾಗಿ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಕ್ಷದ ವತಿಯಿಂದ ಹೇಳಿಕೆ ನೀಡಿದ್ದಾರೆ.
ಕೀಳು ಭಾಷೆಯನ್ನು ದೇಶದ ಪ್ರಧಾನಿ ಬಗೆಗೆ ಬಳಸಿದ್ದು ಖಂಡನೀಯ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹೇಸಿಗೆ ನುಡಿ ಸರಿಯಲ್ಲ. ಮೋದಿಯವರು ಹೋದ ವರುಷ ಕೊರೋನಾ ನಿಬಾಯಿಸುವಲ್ಲಿ ಪಡೆದ ಯಶಸ್ಸು ಅದ್ಭುತ ಎಂದೂ ಅವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ವಕೀಲ ಸಿ. ಎಸ್. ದ್ವಾರಕಾನಾಥ್ ಅವರು ಆ ಜಾಹೀರಾತಿನಲ್ಲಿ ನನ್ನನ್ನು ಕೇಳದೆಯೇ ನನ್ನ ಹೆಸರು ಬಳಸಿದ್ದಾರೆ ಎಂದು ಹೇಳಿದ್ದಾರೆ.